×
Ad

ಸಾಹಿತಿಗಳು ಕನ್ನಡ ಶಕ್ತಿ ಕೇಂದ್ರವಾಗಿದ್ದಾರೆ:ಪ್ರೊ.ಕೆ.ಭೈರವಮೂರ್ತಿ

Update: 2017-09-02 21:42 IST

ಮಂಡ್ಯ, ಸೆ.2: ಸಾಹಿತಿಗಳು ಸಂಸ್ಕೃತಿಯ ರಕ್ಷಕರಾಗಿದ್ದು, ಕನ್ನಡದ ಶಕ್ತಿ ಕೇಂದ್ರಗಳಾಗಿದ್ದಾರೆ. ಕವಿಗಳನ್ನು ಜೋಪಾನ ಮಾಡಿದರೆ, ಕನ್ನಡ ಭಾಷೆಯನ್ನು ಜೋಪಾನ ಮಾಡಿದಂತೆ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಂಧಿಭವನದಲ್ಲಿ ‘ಸಂಸ್ಕೃತಿ’ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ ವತಿಯಿಂದ ಶನಿವಾರ ನಡೆದ ಸಾಹಿತಿ ದಂಪತಿಗಳಿಗೆ ತವರೂರಿನ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತಿಗಳು ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಾಹಿತಿಗೆ ವಿಶ್ರಾಂತಿ ಎಂಬುದೇ ಇರುವುದಿಲ್ಲ. ಅವರ ಮನಸ್ಸು ಯಾವತ್ತೂ ಭಾಷೆ, ಸಂಸ್ಕೃತಿ, ಸಮಾಜದ ಬಗ್ಗೆ ಮಿಡಿಯುತ್ತಿರುತ್ತದೆ. ಇಂತಹ ಮನಸ್ಥಿತಿ ಇರುವವರು ಮಾತ್ರ ನಿಜವಾದ ಸಾಹಿತಿಗಳಾಗಲು ಸಾಧ್ಯ ಎಂದು ಅವರು ವಿವರಿಸಿದರು.

ವಿದ್ಯೆ ಜತೆಗೆ ವಿನಯ ಇದ್ದರೆ ಜ್ಞಾನ ಸಂಪತ್ತು ಲಭಿಸುತ್ತದೆ. ಬೆಳಕು ಮತ್ತು ಮಾಧುರ್ಯದಿಂದ ಸಂಸ್ಕಾರ ದೊರೆಯುತ್ತದೆ. ಸಾಹಿತಿಗಳು ಬೆಳಕು ಮತ್ತು ಮಾಧುರ್ಯಯನ್ನು ಮನುಕುಲಕ್ಕೆ ಹಂಚುತ್ತ ಸಮಾಜಕ್ಕೆ ಬೆಳಕು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಸಾಹಿತಿ ದಂಪತಿಗಳಾದ ಜಿ.ಎಸ್.ವಸಂತಮಾಲ ಡಾ.ಎಂ.ಜಯಚಂದ್ರ ಮತ್ತು ಡಾ.ಪ್ರೀತಿ ಶುಭಚಂದ್ರ ಅವರಿಗೆ ತವರಿನ ಸನ್ಮಾನ ಮಾಡಲಾಯಿತು. 
ಚಾಮರಾಜನಗರ ಜಿಲ್ಲೆಯ ಕನಕಗಿರಿ ಕ್ಷೇತ್ರದ ಜೈನಮಠದ ಭುವನಕೀರ್ತಿಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  ಸಾಹಿತಿ ಡಾ.ಸಿ.ನಾಗಣ್ಣ, ಸಂಸ್ಕೃತಿ ಸಂಘಟನೆಯ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಎಂ.ವಿ.ಧರಣೇಂದ್ರಯ್ಯ, ಡಾ.ಎಸ್.ಶ್ರೀನಿವಾಸಶೆಟ್ಟಿ, ಬಿ.ಪ್ರಸನ್ನಯ್ಯ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News