×
Ad

ಸಾರಿಗೆ ಬಸ್ ಢಿಕ್ಕಿ:ಪಾದಚಾರಿ ಸಾವು

Update: 2017-09-02 21:51 IST

ಮಂಡ್ಯ, ಸೆ.2: ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಸಾರಿಗೆ ಬಸ್ ಢಿಕ್ಕಿಯೊಡೆದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಗ್ರಾಮದ ರಾಮೇಗೌಡ ಪುತ್ರ ಮೊಗ್ಗಣ್ಣ(40) ಎಂಬವರು ಸಾವನ್ನಪ್ಪಿದ್ದಾರೆ.  ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಜಿಪಂ ಸದಸ್ಯ ಸಿ.ಅಶೋಕ್ ಗ್ರಾಮಸ್ಥರ ಜತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪರಿಹಾರಕ್ಕೆ ಒತ್ತಾಯಿಸಿದರು.

ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ಮಹದೇವಪ್ಪ ಮೃತರ ಕುಟುಂಬಕ್ಕೆ ಇಲಾಖೆಯಿಂದ 50 ಸಾವಿರ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು. 1 ಲಕ್ಷ ರೂ.ಗೆ ಗ್ರಾಮಸ್ಥರು ಪಟ್ಟುಹಿಡಿದರು. ಸಂಸ್ಥೆಯ ಮೇಲಾಧಿಕಾರಿ ಜತೆಗೆ ದೂರವಾಣಿಯಲ್ಲಿ ಗ್ರಾಮಸ್ಥರ ಬೇಡಿಕೆಯನ್ನು ಪುಟ್ಟಣ್ಣಯ್ಯ ಮುಂದಿಟ್ಟರು. ಕೊನೆಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ಸಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News