ಮುಂಡಗೋಡ : ಶಾಂತಿಯತ ಬಕ್ರೀದ್ ಹಬ್ಬ ಆಚರಣೆ
Update: 2017-09-02 23:34 IST
ಮುಂಡಗೋಡ,ಸೆ.2 : ತ್ಯಾಗ ಮತ್ತು ಬಲಿದಾನ ಸಂಕೇತ ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ತಾಲೂಕಿನಾದ್ಯಂತ ಶಾಂತಿಯಿಂದ ಆಚರಿಸಿದರು.
ಪಟ್ಟಣದ ಐದು ಮಸೀದಿಗಳ ಜಮಾತಿನ ಮುಸ್ಲಿಂ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ಮುಸ್ಲಿಂ ಬಾಂದವರು ಯಲ್ಲಾಪುರ ರಸ್ತೆಯ ನೂರಾನಿ ಮಸೀದಿ ಹತ್ತಿರ ಶ್ವೇತ ವಸ್ತ್ರಧರಿಸಿ ಜಮಾವಣೆಗೊಂಡು ಈದ್ಗಾ ಮೈದಾನಕ್ಕೆ ತೆರಳಿ ಈದ್ ನಮಾಝ್ ಪೊರೈಸಿದರು.