×
Ad

ಜಿಲ್ಲಾ ಪೊಲೀಸ್‍ನಿಂದ ಹೆಲ್ಪ್‍ಲೈನ್ ವಾಲ್ ಉಧ್ಘಾಟನೆ

Update: 2017-09-03 16:57 IST

ಚಿಕ್ಕಮಗಳೂರು, ಸೆ.3: ನಗರದ ಎಂ.ಜಿ.ರಸ್ತೆಯಲ್ಲಿರುವ ಹಳೆಯ ನಗರ ಪೊಲೀಸ್ ಠಾಣೆ ಕಟ್ಟಡದಲ್ಲಿ ಕ್ರೇಡೆನ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಹೆಲ್ಪ್ ಲೈನ್ ವಾಲ್ ಕಾರ್ಯಕ್ರಮವನ್ನು ಭಾನುವಾರ ಎಐಟಿ ಕಾಲೇಜ್ ಪ್ರಾಂಶುಪಾಲ ಸುಬ್ಬರಾಯ್ ಉಧ್ಘಾಟಿಸಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮಾತನಾಡಿ, ಸಾರ್ವಜನಿಕರು ತಮ್ಮಲ್ಲಿ ಅಧಿಕ ಅಥವಾ ಅವಶ್ಯಕತೆ ಇಲ್ಲದೇ ಇರುವ ವಸ್ತುಗಳಾದ ಬಟ್ಟೆಗಳು, ಪುಸ್ತಕಗಳು, ಆಹಾರ ಪದಾರ್ಥಗಳು, ಪೆನ್, ಪೆನ್ಸಿಲ್, ಹೊದಿಕೆಗಳು ಇತ್ಯಾದಿ ವಸ್ತುಗಳನ್ನು ಹೆಲ್ಪಿಂಗ್ ವಾಲ್‍ನಲ್ಲಿ ತಂದು ಇಡಬಹುದು. ಈ ವಸ್ತುಗಳ ಅವಶ್ಯಕತೆ ಇರುವ ವ್ಯಕ್ತಿಗಳು ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.

ಈ ಯೋಜನೆಯಿಂದ ತಮ್ಮಲ್ಲಿರುವ ವಸ್ತುಗಳನ್ನು ಹೊಂದಿದ್ದವರು, ವಸ್ತುಗಳು ಹೊಂದಿಲ್ಲದವರ ಮದ್ಯೆ ಸಂಪರ್ಕ ಕಲ್ಪಿಸಲಾಗುವುದು. ಇದರಿಂದ ಬಡವರು ಮತ್ತು ಅವಶ್ಯಕತೆ ಇರುವವರು ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಸಮಾಜದಲ್ಲಿ ಅತ್ಯವಶ್ಯಕ ಮೂಲಭೂತ ಸಮಸ್ಯೆಗಳು ಈ ಯೋಜನೆಯಿಂದ ಇಳಿಮುಖವಾಗುವುದು ಹಾಗೂ ಬಡವರ ಮತ್ತು ಕೆಳವರ್ಗದವರಿಗೆ ನೆರವನ್ನು ನೀಡಿದಂತಾಗುತ್ತದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News