ಮಡಿಕೇರಿ: ವನ ಮಹೋತ್ಸವ ಕಾರ್ಯಕ್ರಮ
Update: 2017-09-03 17:47 IST
ಮಡಿಕೇರಿ, ಸೆ.3: ತಾಲೂಕಿನ ಪೊನ್ನಂಪೇಟೆ ಸರ್ಕಾರಿ ಶಾಲಾ ಆವರಣದಲ್ಲಿ ಗೋಣಿಕೊಪ್ಪ ರೋಟರಿ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವನ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವೇಳೆ ವಿದ್ಯಾಥಿಗಳಿಗೆ ಉತ್ತಮ ವಾತಾವರಣ ಸಿಗುವಂತೆ ಹೂ ಹಾಗೂ ಹಣ್ಣು ಬಿಡುವ ಗಿಡಗಳನ್ನು ಪ್ರತೀ ಸದಸ್ಯರು ನೆಟ್ಟರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಮಚ್ಚಮಾಡ ವಿಜಯ್, ಕಾರ್ಯದರ್ಶಿ ಪಾರುವಂಗಡ ದಿಲನ್ ಚೆಂಗಪ್ಪ, ಶಾಲಾ ಮುಖ್ಯ ಶಿಕ್ಷಕ ವಾಸು ವರ್ಮ ಪಾಲ್ಗೊಂಡಿದ್ದರು.