ಹೊನ್ನಾವರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಹೊನ್ನಾವರ, ಸೆ.3: ತಾಲೂಕಿನ ಖರ್ವಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಎಚ್.ಪಿ.ಎಸ್. ಖರ್ವಾ ಶಾಲಾ ಆವರರಣದಲ್ಲಿ ನಡೆಯಿತು.
ಮಾವಿನ ಕುರ್ವಾ ಪಂಚಾಯತ್ ಅಧ್ಯಕ್ಷ ತಿಲಕ ಜೆ. ಗೌಡ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತವಿಕ ಮಾತನಾಡಿದರು.
ಈ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕತ, ಕಾಷ್ಠ ಶಿಲ್ಪಿ ಅರುಣ ಶೆಟ್ಟಿ(ಗುಡಿಗಾರ) ಕವಲಕ್ಕಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ ಗೌಡ ವಹಿಸಿದ್ದರು. ಶಿಕ್ಷಣ ಸಂಯೋಜಕ ಆರ್.ಪಿ. ಹರಿಜನ, ಗ್ರಾಪಂ ಸದಸ್ಯೆ ಶಾರದಾ ನಾಯ್ಕ, ಪ್ರಾಶಾಶಿ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಜಿ.ನಾಯ್ಕ, ರಾಸ ನೌಕರರ ಸಂಘದ ಉದಯ ನಾಯ್ಕ, ಶಿಕ್ಷಕ ವಿ.ಪಿ.ಯಾಜಿ, ಸಿಆರ್ ಪಿ ಶಿವಾನಂದ ಹೆಗಡೆ, ಮುಖ್ಯಾಧ್ಯಾಪಕ ಕೆ.ಎಮ್. ಗೌಡ ಉಪಸ್ಥಿತರಿದ್ದರು.
ಎಮ್.ಜಿ. ನಾಯ್ಕ ಸ್ವಾಗತಿಸಿದರು, ಶಿಕ್ಷಕ ಎಸ್.ಎಲ್. ಹೆಗಡೆ ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕ ಶಿವಾನಂದ ಹೆಗಡೆ ವಂದಿಸಿದರು, ಶಿಕ್ಷಕ ಆರ್.ಬಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.