×
Ad

ಚಾಮರಾಜನಗರ: ಜಿಲ್ಲಾ ಬಿಜೆಪಿ ಎಸ್ಪಿ ಮೋರ್ಚಾ ಕಾರ್ಯಕಾರಣಿ ಸಭೆ

Update: 2017-09-03 20:15 IST

ಚಾಮರಾಜನಗರ, ಸೆ. 2: ದಲಿತರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಜನಪರ ಯೋಜನೆಗಳನ್ನು ಜಾರಿ ಮಾಡಿ ಸುಭದ್ರ ಭಾರತ ನಿರ್ಮಾಣದ ಕನಸು ಹೊಂದಿರುವ  ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಪಕ್ಷವನ್ನು ದಲಿತರು  ಬೆಂಬಲಿಸಬೇಕು ಎಂದು  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರೊಂದುಶೆಟ್ಟಿ ಮನವಿ ಮಾಡಿದರು. 

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ  ಶನಿವಾರ ನಡೆದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು  ದಲಿತರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಡವರು ಹಾಗು ಮಧ್ಯಮ ವರ್ಗಗಳ ಪರವಾಗಿದ್ದಾರೆ ಎಂದು ತಿಳಿಸಿದರು. 

ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕೆರೆಹಳ್ಳಿ ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರಿನಲ್ಲಿ ನಡೆದಿರುವ ಶರತ್ ಮಡಿವಾಳ ಹತ್ಯೆ ಹಾಗೂ ಹಿಂದೂ ಮುಖಂಡರ ಹತ್ಯೆ ವಿರೋಧಿ, ರಾಷ್ಟ್ರದ್ರೋಹಿ ಕೆಲಸದಲ್ಲಿ ನಿರತವಾಗಿರುವ  ಪಿಎಫ್‍ಐ ಮತ್ತು ಕೆಎಫ್‍ಡಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕೈಗೊಂಡಿರುವ ಬೃಹತ್ ಬೈಕ್ ರ್ಯಾಲಿಗೆ  ಬಿಜೆಪಿ ಎಸ್ಸಿ ಮೋರ್ಚಾ ಸಂಪೂರ್ಣ ಬೆಂಬಲವನ್ನು ನೀಡುವ ಜೊತೆಗೆ ರ್ಯಾಲಿಯಲ್ಲಿ ಭಾಗವಹಿಸಲಿದೆ ಎಂದರು. 

ಯಡಿಯೂರಪ್ಪ ಅವರ 30 ಜಿಲ್ಲೆಗಳನ್ನು ಪ್ರವಾಸ ಮಾಡಿ  ಅಲ್ಲಿನ ದಲಿತರ ಕೇರಿಗಳಿಗೆ ಹೋಗಿ  ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಜೊತೆಗೆ ನನಗೆ ಅತಿಥ್ಯ ನೀಡಿದ ದಲಿತ ಬಂಧುಗಳನ್ನು  ಬೆಂಗಳೂರಿನ ತಮ್ಮ ನಿವಾಸಕ್ಕೆ  ಆಹ್ವಾನಿಸಿ, ಅತಿಥ್ಯ ನೀಡಿದ್ದಾರೆ. ಇಂಥ ಕನಿಷ್ಠ ಸೌರ್ಜನ್ಯವನ್ನೂ ತೋರದ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಸಂಘಟನೆ ಮಾಡಲು ಜೊತೆಗೆ ದಲಿತ ಸಮುದಾಯ ಹೆಚ್ಚಿನ ರೀತಿಯಲ್ಲಿ ಬಿಜೆಪಿಯನ್ನು ಬೆಂಬಲಿಸುವ  ನಿಟ್ಟಿನಲ್ಲಿ 7 ಮಂಡಲಗಳ ಪದಾಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು. ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. 

ಸಭೆಯಲ್ಲಿ  ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಮಚವಾಡಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ನಾಗೇಂದ್ರಸ್ವಾಮಿ, ಶಾಂತಮೂರ್ತಿ, ರಾಜ್ಯ ಕಾರ್ಯಕಾರಣಿ ಸದಸ್ಯ  ಕೂಡ್ಲುರು ಶ್ರೀಧರಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶೇಷಣ್ಣ, ಹೊಂಗನೂರು ಪುಟ್ಟಸ್ವಾಮಿ, ಸರ್ವೇಸ ಬಸವಯ್ಯ, ಟಿ.ಕೆ. ರಂಗಯ್ಯ, ಮಂಡಲದ ಮೋರ್ಚಾದ ಅಧ್ಯಕ್ಷರಾದ  ನಗರದ ಮುತ್ತಿಗೆಮೂರ್ತಿ, ಗುಂಡ್ಲುಪೇಟೆ ಬಸವರಾಜು,  ಯಳಂದೂರಿನ ರಘು ಮೊದಲಾದವರು ಇದ್ದರು. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News