×
Ad

ಎಲ್ಲಾ ಗ್ರಾ.ಪಂ.ನೌಕರರಿಗೆ e-fms ಮೂಲಕ ವೇತನಕ್ಕೆ ಒತ್ತಾಯ

Update: 2017-09-04 20:23 IST

ತುಮಕೂರು,ಸೆ.04:ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೂ e-ಜಿms ಮೂಲಕ  ವೇತನಕ್ಕೆ  ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ವತಿಯಿಂದ ನಗರದ ಟೌನ್‍ಹಾಲ್ ವೃತ್ತದಿಂದ ಮೆರವಣಿಗೆ ನಡೆಸಿ ಜಿಲ್ಲಾ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಪಂಚಾಯತ್ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಕಳೆದ ಆಗಸ್ಟ್ 17 ರಂದು ಗ್ರಾಮ್ಭಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿ ಅನುಮೋದನೆಗೊಂಡ ಪಂಚಾಯತ ನೌಕರರಿಗೆ e-fms ಮೂಲಕ ಸಂಬಳ ಪಾವತಿ ಮಾಡಲು ನೌಕರರ ವಿವರವನ್ನು ಪಂಚತಂತ್ರದಲ್ಲಿ ಅಳವಡಿಸಲು ಸೂಚಿಸಿದ್ದಾರೆ. ಇದರಿಂದ ಅನುಮೋದನೆಗೊಳ್ಳದ ನೌಕರರಿಗೆ ಭಾರೀ ಅನ್ಯಾಯವಾಗುತ್ತದೆ.ರಾಜ್ಯದಲ್ಲಿ 25000 ನೌಕರರು ಇನ್ನೂ ಅನುಮೋದನೆ ಗೊಂಡಿಲ್ಲ.ಜಿಲ್ಲೆಯಲ್ಲಿ ಅನುಮೋದನೆಗೊಳ್ಳದ ನೂರಾರು ನೌಕರರು ಇದ್ದು ಪಿಡಿಓ,ಕಾರ್ಯದರ್ಶಿಗಳು,ಜಿಲ್ಲಾ ಪಂಚಾಯತಿಗೆ ಅನುಮೋದನೆ ಪ್ರಸ್ತಾವನೆಗಳನ್ನು ಕಳುಹಿಸದಿರುವುದೇ ಪ್ರಮುಖ ಕಾರಣವಾಗಿದ್ದು,ತಕ್ಷಣ ಅನುಮೋದನೆ ಪ್ರಸ್ತಾವನೆಗಳನ್ನು ಜಿಲ್ಲಾ ಪಂಚಾಯತ್‍ಗೆ ಕಳುಹಿಸಿಕೊಡಲು ಪಿಡಿಓ, ಕಾರ್ಯದರ್ಶಿಳಿಗೆ ನಿರ್ದೇಶನ ನೀಡಿ ಪ್ರಸ್ತಾವನೆಗಳನ್ನು ಅನುಮೋದನೆ ಮಾಡಬೇಕೆಂದು ಆಗ್ರಹಿಸಿದ ಅವರು,ಬಡ್ತಿ ಸಂಬಂಧ ಮೊದಲಿನಂತೆ ಎಸ್.ಎಸ್.ಎಲ್.ಸಿಯನ್ನೇ ಪರಿಗಣಿಸುವ ವಿಷಯ ಇತ್ಯಾರ್ಥಗೊಂಡಿಲ್ಲ.ಎಸ್.ಎಸ್.ಎಲ್.ಸಿಯನ್ನೇ ಪರಿಗಣಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಗ್ರಾಮಪಂಚಾಯ್ತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ,ಹಲವು ವರ್ಷ ದುಡಿದವರಿಗೆ ಅನುಮೊದನೆಗೆ ಪಟ್ಟಿ ಕಳುಹಿಸಲು ಗ್ರಾಮ ಪಂಚಾಯ್ತಿ ಮಟ್ಟದಿಂದ ಆರಂಭವಾಗಿ ಮೇಲ್ಮಟ್ಟದವರೆಗೂ ಲಂಚ ಹಾವಳಿ ವಿಫರೀತವಾಗಿದ್ದು,ಹಲವು ಪ್ರಭಾವಗಳು ಹಾಗೂ ಒತ್ತಡಗಳಿಗೆ ಮಣಿದು ಪಟ್ಟಿಯಲ್ಲಿ ಏರುಪೇರು ಮಾಡಲಾಗುತ್ತಿದೆ.ಪಾರದರ್ಶಕ ನ್ಯಾಯಸಮ್ಮತ ರೀತಿಯಲ್ಲಿ ಪಟ್ಟಿಯನ್ನು ತಯಾರಿಸಲು ಆಗ್ರಹಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್ ಮಾತನಾಡಿ,ಜಿಲ್ಲೆಯಲ್ಲಿ ಜೇಷ್ಟತಾಪಟ್ಟಿಯನ್ನು ಶೀಘ್ರ ಬಿಡುಗಡೆಮಾಡಿ ಗ್ರೇಡ್-2 ಕಾರ್ಯದರ್ಶಿಗೆ ಹಾಗೂ ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡಬೇಕೆಂದು ಆಗ್ರಹಿಸಿದ ಅವರು ನೌಕರರಿಗೆ ತಾರತಮ್ಯ ಮಾಡದೆ ಎಲ್ಲರಿಗೂ ವೇತನ ನೀಡಬೇಕೆಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‍ಮುಜೀಬ್ ಮಾತನಾಡಿ,ಎಲ್ಲಾ ನೌಕರರಿಗೂ ಸಾಮಾಜಿಕ ಭದ್ರತೆ, ಪಿಂಚಣಿ, ಕೆಲಸದ ಭದ್ರತೆ, ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡಬೇಕು. ಎಲ್ಲಾ ನೌಕರರಿಗೂ ಕನಿಷ್ಠ ವೇತನ 18 ಸಾವಿರ ಸೇರಿದಂತೆ ಕಾರ್ಮಿಕರು, ನೌಕರರ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸೆಪ್ಟೆಂಬರ್ 14 ರಂದು ಸಿಐಟಿಯು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನು ನಡೆಸಲಾಗುತ್ತಿದ್ದು ಗ್ರಾಮ ಪಂಚಾಯ್ತಿ ನೌಕರರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜಿ.ಶಾಂತರಾಮ್,ಜಿಲ್ಲಾ ಪಂಚಾಯ್ತಿಯ ಅಡಿಯಲ್ಲಿ ಆಗಬೇಕಾದ ಅನುಮೋದನೆ ಮತ್ತು ಸಾಮಾನ್ಯ ಪಟ್ಟಿಯನ್ನು ಈ ತಿಂಗಳ ಕೊನೆಯಲ್ಲಿ ಮಾಡಲಾಗುವುದು.15 ದಿನಗಳ ಒಳಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಇತರೆ ಸಮಸ್ಯೆಗಳ ಬಗ್ಗೆ ಸಂಘದ ಮುಖಂಡರೊಂದಿಗೆ ಸಭೆಯನ್ನು ನಡೆಸಲಾಗುವುದು ಎಂದರು ಈ ಸಚಿದರ್ಭದಲ್ಲಿ ಉಪಕಾರ್ಯದರ್ಶಿ (ಅಭಿವೃದ್ಧಿ) ಕರಿಯಪ್ಪನವರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ತುಮಕೂರು ತಾಲೂಕಿನ ಪಂಚಾಕ್ಷರಿ, ಚಂದ್ರಪ್ಪ, ಚಿಕ್ಕನಾಯಕನಹಳ್ಳಿಯ ಶಂಕರಪ್ಪ, ಚಂದ್ರಪ್ಪ, ತಿಪಟೂರಿನ ಬಸವರಾಜು, ರಾಜು, ಕುಣಿಗಲ್‍ನ ಶ್ರೀನಿವಾಸ್, ಪ್ರಕಾಶ್, ಕೊರಟಗೆರೆಯ ನಾಗಭೂಷಣ್, ಮಧುಗಿರಿಯ ಲಕ್ಷ್ಮೀಪತಿ, ಶಿರಾದ ಲಿಂಗರಾಜು, ಲಕ್ಷ್ಮಮ್ಮ, ತುರುವೇಕೆರೆಯ ರಂಗನಾಥ್, ಗಾಯಿತ್ರಮ್ಮ, ಶಿವರಾಮು, ಗುಬ್ಬಿಯ ಶಿವಕುಮಾರ್, ಭಷೀರ್‍ಅಹಮದ್, ಪಾವಗಡದ ಸುಬ್ಬರಾಯಪ್ಪ ಕಂಪ್ಯೂಟರ್ ಆಪರೇಟರ್‍ಗಳಾದ ಗಂಗಣ್ಣ, ರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News