×
Ad

ಈಜಲು ಹೋಗಿದ್ದ ಯುವಕ ನೀರಪಾಲು

Update: 2017-09-04 23:40 IST

ಗುಂಡ್ಲುಪೇಟೆ,ಸೆ.4: ಕೃಷಿಹೊಂಡದಲ್ಲಿ ಈಜಾಡಲು ಹೋಗಿದ್ದ ಯುವಕನೊಬ್ಬ ಕಾಲುಜಾರಿ ಬಿದ್ದು  ಸಾವಿಗೀಡಾಗಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೇ. ದೊಡ್ಡಮಾದೇಗೌಡ ಎಂಬುವರ ಮಗ ಸುರೇಶ್(21) ಎಂಬಾತ ಈಜಾಡಲು ರಮೇಶ್ ಎಂಬುವರ ಜಮೀನಿನ ಕೃಷಿ ಹೊಂಡಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಜಮೀನಿನಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದ್ದು ಬಹಳ ಹೊತ್ತಿನ ನಂತರ ಅಕ್ಕಪಕ್ಕದ ಜಮೀನಿನವರು ನೋಡಿದಾಗ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಟ್ಟಣ ಪೆÇಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News