ಅಧ್ಯಯನಗಳು ಸಮಾಜಮುಖಿಯಾಗಲಿ : ನಾಗತೀಹಳ್ಳಿ ಚಂದ್ರಶೇಖರ್

Update: 2017-09-04 18:24 GMT

ತುಮಕೂರು,ಸೆ.04:ನಾವು ಮಾಡುವ ಅಧ್ಯಯನಗಳು ನಮ್ಮ ಸುತ್ತಮುತ್ತಲಿನ ಸಂಕಷ್ಟಗಳನ್ನು ದೂರ ಮಾಡಿ,ಜನರು ಗೌರವಯುತ ಬದುಕು ಕಟ್ಟಿಕೊಳ್ಳುವಂತಿರಬೇಕು ಎಂದು ಚಿತ್ರನಿರ್ದೇಶಕಲ ನಾಗತೀಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ತುಮಕೂರು ವಿವಿ ಸಂಯೋಜಿತ ಕಾಲೇಜುಗಳಲ್ಲಿ ಒಚಿದಾದ ಕಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ವಿದ್ಯಾರ್ಥಿಗಳ ಅರ್ಧಯಯನ ಜ್ಞಾನಾರ್ಜನೆಯು ನಮ್ಮ ಸಮುದಾಯದ ಏಳಿಗೆಯನ್ನು ದರ್ಶಿಸಬೇಕು ಎಂದರು.
ನಾವು ಮಾಡುವ ಅಧ್ಯಯನಗಳು ನಮ್ಮ ವಯುಕ್ತಿಕ ಬೆಳವಣಿಗೆಯ ಜೊತೆಗೆ,ಸಮುದಾಯದ ಬೆಳವಣಿಗೆಗೂ ಸಹಕಾರಿಯಾದರೆ ಮಾತ್ರ ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ. ವಿದ್ಯಾವಂತರಿಗೂ ಸಮಾಜದಲ್ಲಿ ಬೆಲೆ ದೊರೆಯುತ್ತಿದೆ.ಈ ನಿಟ್ಟಿನಲ್ಲಿ ಅಧ್ಯಯನಗಳು ಸಮಾಜಮುಖಿಯಾಗಿರಬೇಕು ಎಂಬುದು ನಮ್ಮ ಆಶಯ ಎಂದು ನಾಗತೀಹಳ್ಳಿ ಚಂದ್ರಶೇಖರ್ ನುಡಿದರು.

ಪತ್ರಕರ್ತ ಲಕ್ಷ್ಮಣ್ ಹೂಗಾರ್ ಮಾತನಾಡಿ,ವಿದ್ಯಾರ್ಥಿಗಳು ನೀರು ಮತ್ತು ಪ್ರಾಥಮಿಕ ಸಮಾನ ಶಿಕ್ಷಣಕ್ಕಾಗಿ ಹೋರಾಡಿ ಬುದ್ಧ, ಬಸವಣ್ಣ, ಫುಲೆ, ಅಂಬೇಡ್ಕರ್‍ರಂತಹ ದಾರ್ಶನಿಕರ ತತ್ವಾದರ್ಶಗಳನ್ನು ರೂಢಿಸಿಕೊಂಡರೆ ಮಾತ್ರ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರ ಕುಲಪತಿ ಪ್ರೊ.ಜಯಶೀಲ ವಹಿಸಿದ್ದರು,ಕುಲಸಚಿವರಾದ ಪ್ರೊ. ಎಂ.ವೆಂಕಟೇಶ್ವರಲು ರವರ ವಿಶ್ವವಿದ್ಯಾನಿಲಯದ ವಿವಿಧ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News