×
Ad

ನನ್ನ ಕೈ ಚರ್ಮ ಕಿತ್ತುಕೊಂಡು ಬಂದಿದೆ : ಶೋಭಾ

Update: 2017-09-05 14:04 IST

ಬೆಂಗಳೂರು , ಸೆ.5: ನನ್ನ ಕೈ ಚರ್ಮ ಕಿತ್ತುಕೊಂಡು ಬಂದಿದೆ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು. ಆದರೆ ಪೊಲೀಸರು ಬಂದು  ನಮ್ಮನ್ನು ಹಿಡಿದು ಎಳೆದಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ  ಆರೋಪಿಸಿದ್ದಾರೆ.

ಮಂಗಳೂರು ಚಲೋಗೆ  ಚಾಲನೆ ನೀಡಲು ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ  ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಮಹಿಳಾ ಎಸ್ಐ ಕಾತ್ಯಾಯಿನಿ ಬಂಧಿಸಿದ್ದರು. ಆದರೆ ಬಂಧನದ ವೇಳೆ ಎಳೆದಾಟದಿಂದ ಕೈ , ಕಾಲಿಗೆ ಗಾಯವಾಗಿದೆ ಎಂದು ಶೋಭಾ ದೂರಿದ್ದಾರೆ.

ಪೊಲೀಸರು  ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ.ಎರಡು ತಿಂಗಳ ಹಿಂದೆ  ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದೇ ಕಾಲಿಗೆ ಮತ್ತೆ ಗಾಯವಾಗಿದೆ ಎಂದು ಶೋಭಾ ಅವರು ಖಾಸಗಿ  ಟಿವಿ ಚಾನಲೊಂದಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News