ಶಿಕ್ಷಣದಲ್ಲಿ ಜ್ಞಾನದ ಕ್ರಾಂತಿಯಾಗಬೇಕು : ಪ್ರೊ.ಕೃಷ್ಣೇಗೌಡರು
ಗುಂಡ್ಲುಪೇಟೆ, ಸೆ.5: ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಖಡ್ಡಾಯ ಶಿಕ್ಷಣ ನೀಡಿ ಆಗ ಹಿಂದುಳಿದಿರುವ ಸಾಕ್ಷರತೆ ಪ್ರಮಾಣ ವೃದ್ಧಿಯಾಗುತ್ತದೆ ಎಂದು ಸಾಹಿತಿ ಹಾಗೂ ಚಿಂತಕ ಪ್ರೊ.ಕೃಷ್ಣೇಗೌಡರು ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದ ಅವರು, ಶಿಕ್ಷಣ ಈ ದೇಶದ ಸಂಪತ್ತಾಗಿದ್ದು ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಸಂಬಳವನ್ನೇ ಮುಖ್ಯಗುರಿಯಾಗಿಸಿಕೊಳ್ಳದೆ ಹೆಚ್ಚಿನ ಸಮಯವನ್ನು ಮಕ್ಕಳ ಭವಿಷ್ಯದ ಕಡೆ ಗಮನಹರಿಸಿ. ಶಿಕ್ಷಣವನ್ನೇ ಪ್ರಥಮ ಆದ್ಯತೆ ಎಂದು ಪರಿಗಣಿಸಿ ಮಕ್ಕಳ ಸುಪ್ತ ಪ್ರಜ್ಞೆಯನ್ನು ಹೊರತಂದು ಮೌಲ್ಯಯುತವಾದ ಕೊಡುಗೆ ನೀಡಿ ಎಂದರು.
ಕವಿಗಳಿಗೆ ಕನಸಿದೆ ಆದರೆ ನನಸು ಮಾಡುವ ಅಧಿಕಾರ ಇಲ್ಲ, ಅಧಿಕಾರಿಗಳಿಗೆ ಕನಸಿಲ್ಲದ ಪರಿಣಾಮ ಯಾವುದೇ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಆದರ್ಶ ಇಲ್ಲದೆ ಯಾವುದೇ ವೃತ್ರಿಯಲ್ಲೂ ಸಾಧನೆ ಮಾಡಲು ಸಾಧ್ಯವಿಲ್ಲ ಆದರ್ಶ ಮೈಗೂಡಿಸಿಕೊಳ್ಳಿ ಫಲಿತಾಂಶಕ್ಕೆ ಕಾರಣ ಹೇಳಬೇಡಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಪ್ರೋತ್ಸಾಹ ನೀಡುವ ಬದಲು ಫೇಲಾದನಿಗೆ ಚೇತನ ನೀಡಿ ಎಂದು ಅನೇಕ ನಿದರ್ಶನಗಳನ್ನು ನೀಡುವುದರ ಮೂಲಕ ತಮ್ಮದೇ ಶೈಲಿಯಲ್ಲಿ ನಕ್ಕು ನಗಿಸಿ ಶಿಕ್ಷಕರನ್ನು ಹುರಿದುಂಬಿಸಿದರು.
ಶಿಕ್ಷಣದಲ್ಲಿ ಜ್ಞಾನದ ಕ್ರಾಂತಿಯಾಗಬೇಕು ಆಗ ಮಾತ್ರ ಪರಿವರ್ತನೆ ಸಾಧ್ಯ. ಎಲ್ಲದಕ್ಕೂ ದುಡ್ಡುಬೇಕು ಎಂದು ಅಪೇಕ್ಷಿಸುವವನು ಶಿಕ್ಷಕನಾಗಬಾರದು ಶಿಕ್ಷಕ ವಿದ್ಯಾರ್ಥಿಗಳಿಂದ ಮಾತ್ರ ಉಳಿಯಲು ಸಾಧ್ಯ ಎಂದು ಶಿಕ್ಷಕರ ಜವಾಬ್ದಾರಿಯನ್ನು ಎತ್ತಿ ಹಿಡಿದರು. ಜಿಲ್ಲೆಯೆ ಶೈಕ್ಷಣಿಕ ಅಭಿವೃದ್ಧಿಗೆ ಸಂಸದ ಧ್ರುವನಾರಾಯಣ್ ಹೆಚ್ಚು ಒತ್ತು ನೀಡಿದ್ದು ಎರಡು ವರ್ಷಗಳಲ್ಲಿ ಮತ್ತೆ ಉತ್ತಮ ಫಲಿತಾಂಶ ತರಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಕ್ಕರೆ ಮತ್ತು ಸಣ್ಣಕೈಗಾರಿಕೆ ಸಚಿವೆ ಡಾ.ಮೋಹನಕುಮಾರಿ ಮಾತನಾಡಿ, ವೃತ್ತಿಗಳಲ್ಲಿಯೇ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿ. ಮಹದೇವಪ್ರಸಾದ್‍ರವರು ಬದುಕಿರುವವರೆಗೆ ಶಿಕ್ಷಣಕ್ಕೆ ಹೆಚ್ಚು ನೀಡಿ ರಾಜ್ಯಕ್ಕೆ ಮಾದರಿಯಾಗುವಂತೆ ತಾಲೂಕಿನಲ್ಲಿ ಮೊರಾರ್ಜಿ ದೆಶಾಯಿ ಶಾಲೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಸೇರಿದಂತೆ ಎಲ್ಲಾ ರೀತಿಯ ಶಾಲೆಗಳನ್ನು ನಿರ್ಮಿಸಲು ಶ್ರಮವಹಿಸಿದ್ದಾರೆ ಇದೀಗ ಕಾನೂನೂ ಕಾಲೇಜು ಶೀಘ್ರವಾಗಿ ನಿರ್ಮಾಣವಾಗಲಿದೆ ಎಂದರು.
ಶಿಕ್ಷಕ ವೃತ್ತಿಯು ಪವಿತ್ರವಾಗಿದ್ದು, ಮುಗ್ಧ ಮಕ್ಕಳ ಮನಸ್ಸು ಅರಿಯು ಅವರನ್ನು ಉತ್ತಮ ಪ್ರಜೆಯನ್ನಾಗಿಸುವ ಗುರುತರ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಕಡಿಮೆಯಾಗುತ್ತಿದ್ದು ವಿದ್ಯಾಥೀಳ ಗ್ರಹಿಕೆಗೆ ತಕ್ಕಂತೆ ಸುಲಭ ಭಾಷೆಯಲ್ಲಿ ಬೋಧನೆ ಮಾಡಿ ಹೆಚ್ಚಿನ ಫಲಿತಾಂ ನೀಡಬೇಕು ಎಂದರು. ನೀವೃತ್ತ ಶಿಕ್ಷಕರನ್ನು ಗಣ್ಯರು ಸನ್ಮಾಸಿದರು.
ಈ ಸಂದರ್ಭದಲ್ಲಿ ಕಾಡಾಧ್ಯಕ್ಷ ಎಚ.ಎಸ್.ನಂಜಪ್ಪ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಾ.ಪಂ.ಅಧ್ಯಕ್ಷ ಎಚ್.ಎನ್.ನಟೇಶ್, ಜಿ.ಪಂ.ಸದಸ್ಯರಾದ ಮಹೇಶ್, ಬೊಮ್ಮಯ್ಯ, ಚೆನ್ನಪ್ಪ, ರತ್ನಮ್ಮ, ತಹಸಿಲ್ದಾರ ಕೆ.ಸಿದ್ದು, ಶಿಕ್ಷಣ ಇಲಾಖೆಯ ಉಪನಿದೇಶಕಿ ಮಂಜುಳ, ಬಿ.ಇ.ಒ.ಹಾಲತಿಸೋಮಶೇಖರ್ ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಮಹೇಶ್, ಕಿರಣ್, ಇನ್ನು ಮುಂತಾವದರು ಇದ್ದರು.