ಚಾಮರಾಜನಗರ: ಗ್ರಾಮಾಂತರ ಮಹಿಳಾ ಮೋರ್ಚಾ ಕಾರ್ಯಕಾರಿ ಸಭೆ
ಚಾಮರಾಜನಗರ, ಸೆ.5: ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬರುವುದು ಕಂಡಿತ ಇದಕ್ಕೆ ಎಲ್ಲಾ ಬಿಜೆಪಿ ಸದಸ್ಯರು ಶ್ರದ್ಧೆ ಯಿಂದ ಕಾರ್ಯನಿರ್ವಹಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ತಿಳಿಸಿದರು.
ನಗರದ ಬಿಜೆಪಿ ಕಾರ್ಯಲಯದಲ್ಲಿ ನಡೆದ ಚಾಮರಾಜನಗರ ಗ್ರಾಮಾಂತರ ಮಹಿಳಾ ಮೋರ್ಚ ಕಾರ್ಯಕಾರಿ ಸಭೆಯನ್ನು ಜ್ಯೊತಿಬೆಳಗಿಸಿ ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರ ನೆತ್ರತ್ವದಲ್ಲಿ 2019ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಅಧಿಕಾರಕ್ಕೆ ಬರಲಿದೆ ನಮ್ಮರಾಜ್ಯಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಗೆಲುವಿಗೆ ಶ್ರಮಿಸುತ್ತ ಬಂದಿದ್ದಾರೆ ಇದಕ್ಕಾಗಿ ಜಿಲ್ಲೆಯ ಯ ಬಿಜೆಪಿ ಮುಖಂಡರು ಮತ್ತು ಮಹೀಳಾ ಮೋರ್ಚದ ಸದಸ್ಯರು ಶ್ರಮವಹಿಸಿ ಸದಸ್ಯತ್ವಗಳನ್ನು ಮಾಡುವುದಲ್ಲಿ ಎಲ್ಲಾರೂ ಕೈ ಜೊಡಿಸಬೇಕು ಎಂದರು.
ಕಾರ್ಯಕಾರಿ ಸಭೆಯ ಅಧ್ಯಕ್ಷತೆಯನ್ನು ಚಾಮರಾಜನಗರದ ಗ್ರಾಮಂತರ ಮಹೀಳಾ ಮೋರ್ಚದ ಅಧ್ಯಕ್ಷರಾದ ಪ್ರೇಮ ಮಾತನಾಡಿ, ಜಿಲ್ಲೆಯಲ್ಲಿ ಮಹೀಳಾ ಸಂಘಟನೆಗಳನ್ನು ಮಾಡುವಲ್ಲಿ ಮಹೀಳಾ ಮೋರ್ಚ ಮುಂದೆ ಇದೇ ಇತ್ತಿಚಿನ ದಿನಗಳಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಸೆರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ ರಾಜ್ಯದ ಅಧ್ಯಕ್ಷರ ಬೆಂಬಲ ಮಹೀಳಾ ಮೋರ್ಚಕ್ಕೆ ಇದೇ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಿಸ್ವಾಮಿ, ಮಹಿಳಾ ಮೋರ್ಚದ ಜ್ಯೋತಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಲಕ್ಷ್ಮಿ, ಸರೋಜಮ್ಮ, ಉಪಾಧ್ಯಕ್ಷೆ ಕುಮಾರಿ ಹಾಜರಿದ್ದರು.