×
Ad

ಬಣಕಲ್‍ನಿಂದ ಮೂಡಿಗೆರೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ

Update: 2017-09-06 19:55 IST

ಬಣಕಲ್, ಸೆ.6:  ಬಣಕಲ್, ಕೊಟ್ಟಿಗೆಹಾರ ಹಾಗೂ ಸುತ್ತಮುತ್ತಲಿನ ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರ ಬೈಕ್ ರ್ಯಾಲಿಯು ಬಣಕಲ್ ಪೆಟ್ರೋಲ್ ಬಂಕ್ ಸಮೀಪದಿಂದ ಮಧ್ಯಾಹ್ನ ಸುಮಾರು 40 ಬೈಕ್‍ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಮೂಡಿಗೆರೆ ಕಡೆಗೆ ಬೈಕ್ ಜಾಥಾಕ್ಕೆ ಚಾಲನೆ ನೀಡಲಾಯಿತು.

ಮೂಡಿಗೆರೆ ಹ್ಯಾಂಡ್ ಪೋಸ್ಟ್ ತನಕ ಯಾವುದೇ ಅಡಚಣೆಯಿಲ್ಲದ ಬೈಕ್ ಜಾಥಾ ನಡೆಯಿತು. ಪೋಲಿಸ್ ಇಲಾಖೆಯ ಅದಿಕಾರಿಗಳು ಕಾನೂನು ಬಂಗ ಆಗದಂತೆ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ರಸ್ತೆಗೆ ಅಡ್ಡಲಾಗಿ ಪೋಲಿಸ್ ಬಾರ್‍ಕೇಡ್ ಹಾಕಿ ಬೈಕ್ ಜಾಥಾ ಮುಂದುವರೆಯದಂತೆ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರಾವಳಿಯ ಗಡಿಭಾಗದಿಂದ ಕೊಟ್ಟಿಗೆಹಾರದ ಬಳಿ ಪೋಲಿಸರು ಬಿಗಿ ಬಂದೋಬಸ್ತು ಮಾಡಲಾಗಿದೆ. ಕರಾವಳಿ ಕಡೆಗೆ ಸಾಗುವ ಪ್ರತಿಯೊಂದು ವಾಹನವನ್ನು ತಪಾಸಣೆಗೊಳಿಸಿ ಬಿಡಲಾಗುತ್ತಿದೆ. ತುಂತುರು ಮಳೆಯ ನಡುವೆಯೂ ಪೋಲಿಸರು ವಾಹನವನ್ನು ನಿಲ್ಲಿಸಿ ವಾಹನಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಂಗಳೂರಿನಲ್ಲಿ ಸೆ.9ರಂದು ಬೈಕ್ ಜಾಥಾ ನಡೆಯಲಿರುವ ಹಿನ್ನಲೆಯಲ್ಲಿ ಸೂಕ್ತ ಕಾನೂನು ಪಾಲನೆಯ ಹಿತಾದೃಷ್ಟಿಯಿಂದ ತಪಾಸಣಾ ಕಾರ್ಯ ಚುರುಕುಗೊಂಡಿದೆ ಎಂದು ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News