ದಾನಗಳಲ್ಲಿ ಶ್ರೇಷ್ಠ ದಾನ ಅನ್ನದಾನ: ಬಿ.ಎಂ.ಸಂದೀಪ್
ಚಿಕ್ಕಮಗಳೂರು, ಸೆ.6: ಧರ್ಮದ ಹೆಸರಿನಲ್ಲಿ ಹಸಿದವರಿಗೆ ಅನ್ನ ನೀಡುವಂತ ಪುಣ್ಯ ಕಾರ್ಯ ಎಲ್ಲಡೆ ನೆಡೆಯಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಂ. ಸಂದೀಪ್ ಹೇಳಿದರು.
ಅವರು ಬುಧವಾರ ನಗರದ ಶಂಕರಪುರ ಬಡಾವಣೆಯ ಮುತ್ತಿನಮ್ಮ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾನಗಳಲ್ಲೇ ಶ್ರೇಷ್ಠ ದಾನ ಅನ್ನದಾನ ಎಂಬ ಪುರಾಣ ಪ್ರಸಿದ್ಧ ಸತ್ಯವನ್ನು ಈ ಅನ್ನ ದಾನದ ಮೂಲಕ ನಾವೆಲ್ಲರೂ ಕಾಣುತ್ತಿದ್ದೇವೆ. ಜಾತಿ ಭೇದ, ಬಡವ ಶ್ರೀಮಂತ ಎಂಬ ಭೇದ ಭಾವವನ್ನು ತೊಡೆದು ಹಾಕಿ ಎಲ್ಲರನ್ನು ಒಗ್ಗೂಡಿಸುವ ಇಂತಹ ಸಾಂಸ್ಕೃತಿಕ, ಕ್ರೀಡಾ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರು ಸಹ ಭಾಗಿಗಳಾಗಬೇಕೆಂದು ಕರೆ ನೀಡಿದರು.
ಬಡವರಿಗೆ ಹಾಗೂ ಹಸಿದವರಿಗೆ ಉಚಿತ ಅಕ್ಕಿ ವಿತರಣೆ, ಇಂದಿರಾ ಕ್ಯಾಂಟೀನ್ ಮೂಲಕ ಊಟದ ವ್ಯವಸ್ಥೆ ಮಾಡುತ್ತಿರುವ ಸಮಾಜ ಮುಖಿ ಕಾರ್ಯಕ್ರಮಗಳು ಸಹ ಜಾತಿ ಭೇದ ಇಲ್ಲದೆ ಬಡವರ ಪರವಾದ ಯೋಚನೆಗಳಾಗಿವೆ. ದೇವರ ಹೆಸರಿನಲ್ಲಿ ನೆಡೆಯುವ ದಾನ ಧರ್ಮದ ಕಾರ್ಯಗಳಿಂದ ಮನುಷ್ಯರ ಮನಸ್ಸುಗಳು ಶುದ್ಧವಾಗಿ ಸಶಕ್ತವಾದ, ಶಾಂತಿ ಸಾಮರಸ್ಯದ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದಂರ್ಭದಲ್ಲಿ ಮುರುಳಿ, ಕಾರ್ತಿಕ್ ಚೆಟ್ಟಿಯಾರ್, ಮಂಜುನಾಥ್, ನಗರ ಸಭೆ ಸದಸ್ಯ ಜಗದೀಶ್, ಕೈಮಾರ ಕುಮಾರ್, ಭರಣಿ, ಮೋಹನ್, ಕುಮಾರ್, ದುರ್ಗೇಶ್, ಮುನಿರಾಜು ಮತ್ತು ಬಾನು ಹಾಜರಿದ್ದರು.