×
Ad

ಮಂಗಳೂರು ಚಲೋ: ಬಿಜೆಪಿ ಕಾರ್ಯಕರ್ತರ ಬಂಧನ

Update: 2017-09-06 21:44 IST

ಮೂಡಿಗೆರೆ, ಸೆ.6: ಆರೆಸ್ಸೆಸ್ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ಪಿಎಫ್ ಐ, ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದ ನೂರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಜೆಪಿ ಹಿರಿಯ ನಾಯಕರ ನೇತೃತ್ವದಲ್ಲಿ ನೂರು ಕಾರ್ಯಕರ್ತರು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸೇರಿದ್ದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರವೀಣ್ ಪುಜಾರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪುಣ್ಯಪಾಲ್, ಎಂಎಲ್‍ಸಿ ಎಂ.ಕೆ.ಪ್ರಾಣೇಶ್, ತಾಪಂ ಅಧ್ಯಕ್ಷ ರತನ್, ಶಾಮಣ್ಣ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಂಡಲಧ್ಯಕ್ಷ ಪ್ರಮೋದ್ ದುಂಡಿಗ, ಸಂಜಯ್ ಕೊಟ್ಟಿಗೆಹಾರ, ಜೆ.ಸ್.ರಘು, ಕಣಚೂರು ವಿನೋದ್, ಮನೋಜ್ ಹಳೇಕೋಟೆ, ಗಜೇಂದ್ರ ತರುವೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸರೋಜ ಸುರೇಂದ್ರ, ಲತಾಲಕ್ಷ್ಮಣ್, ಧನಿಕ್, ಪರೀಕ್ಷಿತ್ ಮತ್ತಿತರರ ಸಹಿತ ಮತ್ತು 31 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಹಿಂದೂಸಂಘಟನೆಯ ಕಾರ್ಯಕರ್ತರ ಕೊಲೆಗೆ ನೇರ ಸಿದ್ದರಾಮಯ್ಯನವರ ಸರ್ಕಾರವೇ ನೇರಹೋನೆ. ಸಿಮಿ ಉಗ್ರ ಸಂಘಟನೆಯ ಮತ್ತೊಂದು ರೂಪವೇ ಪಿಎಫ್ ಐ ಸಂಘಟನೆ ಗಳಾಗಿದೆ. ಮುಂದಿನ 6 ತಿಂಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮುಗಿಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಒಪಿ ಗೆಲುವು ಶತಸಿದ್ಧ. ಇದನ್ನರಿತ ಸರ್ಕಾರ ತನ್ನ ಪ್ರಭಾವ ಬೀರಿ ರ್ಯಾಲಿಗೆ ಅಡ್ಡ ಪಡಿಸುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News