×
Ad

ಮಂಡ್ಯ: ವ್ಯಕ್ತಿ ಆತ್ಮಹತ್ಯೆ

Update: 2017-09-06 22:43 IST

ಮಂಡ್ಯ, ಸೆ.6: ವ್ಯಕ್ತಿಯೊಬ್ಬ ತನ್ನ ಆಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕಲ್ಯಾಣ್ ಚಂದನ್‍ಕುಮಾರ್ (45) ಮೃತ ವ್ಯಕ್ತಿ. ಈತ ಗ್ರಾಮದ ಹೊರವಲಯದಲ್ಲಿ ತನ್ನ ಜಮೀನಿನಲ್ಲಿ ಕಲ್ಯಾಣ್ ಜ್ಞಾನದೇಗುಲ ಎಂಬ ಆಶ್ರಮ ನಿರ್ಮಿಸಿಕೊಂಡು ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದನು ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ತನ್ನ ದೇವರ ಪೂಜೆಗೆ ಹೂವು ತರಲು ಪತ್ನಿಯನ್ನು ಕಳುಹಿಸಿ, ಆಕೆ ಬರುವ ವೇಳೆಗೆ ನೇಣಿಗೆ ಶರಣಾಗಿದ್ದಾನೆ ಎಂದು ತನಿಖೆ ಕೈಗೊಂಡಿರುವ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News