ಗೌರಿ ಹತ್ಯೆಗೆ ಖಂಡನೆ
Update: 2017-09-06 23:34 IST
ಚಿಂತಕಿ, ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ವಿವಿಧ ನಾಯಕರು ಕೃತ್ಯವನ್ನು ಖಂಡಿಸಿದ್ದಾರೆ. ಜೊತೆಗೆ ಹತ್ಯೆಯನ್ನು ಅಮೆರಿಕ ರಾಯಭಾರಿ ಕಚೇರಿಯು ಬಲವಾಗಿ ಖಂಡಿಸಿದೆ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಲಾಲುಪ್ರಸಾದ್ ಯಾದವ್, ಪ್ರಕಾಶ್ ಕಾರಟ್, ಶಬನಾ ಅಝ್ಮಿ, ರಾಜ್‌ದೀಪ್ ಸರ್ದೇಸಾಯಿ ಮೊದಲಾದವರು ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದು, ಇದೊಂದು ಬರ್ಬರ ಕೃತ್ಯ ಎಂದು ಬಣ್ಣಿಸಿದ್ದಾರೆ.