ಮೂಡಿಗೆರೆ: ಚಿನ್ನಿಗ ಸರಕಾರಿ ಶಾಲೆಗೆ ರೋಷನ್ ಬಿಲ್ಡರ್ ಪ್ರಶಸ್ತಿ

Update: 2017-09-07 11:41 GMT

ಮೂಡಿಗೆರೆ, ಸೆ.7: ಚಿನ್ನಿಗ- ಜನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗೋಣಿಬೀಡು ರೋಟರಿ ಸಂಸ್ಥೆ 2017-18 ನೆಸಾಲಿನ ರೋಷನ್ ಬಿಲ್ಡರ್ ಪ್ರಶಸ್ತಿಯನ್ನು ಮುಖ್ಯ ಶಿಕ್ಷಕ ವೀಟ್ಯಾನಾಯ್ಕ್ ಅವರಿಗೆ ನೀಡಿ ಗೌರವಿಸಿದರು.

ಜನ್ನಾಪುರದ ಚಿನ್ನಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿಯನ್ನು ನೀಡಿ ಮಾತನಾಡಿದರು.

ರೋಟರಿ ಅಧ್ಯಕ್ಷ ಕೆ.ಬಿ.ಚಂದ್ರೇಗೌಡ, ಗ್ರಾಮೀಣ ಪ್ರದೇಶದ ಶಾಲೆಯಾದರೂ ಕಲಿಕೆಯ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ಈ ಶಾಲೆಯಲ್ಲಿ ಕಲಿತವರು ಇಂದು ಉನ್ನಥ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.

ಮನೆಯೇ ಮೊದಲ ಪಾಠಶಾಲೆ ನಂತರ ಶಾಲೆಯ ಶಿಕ್ಷಕರೆ ವಿಧ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವವರು ಎನ್ನುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅರಿತುಕೊಂಡು ಗುರುಗಳು ಹಾಕಿಕೊಟ್ಟ ಹಾದಿಯಲ್ಲೆ ನಡೆಯುವಂತೆ ಶಿಕ್ಷಕರು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದರು.

ಈ ವೇಳೆ ಮುಖ್ಯ ಶಿಕ್ಷಕ ವೀಟ್ಯಾನಾಯಕ್, ಶಿಕ್ಷಕರುಗಳಾದ ಬಿ.ಬಾಲಾಜಿ ನಾಯ್ಕ, ಕೆ.ಪಿ.ಮಲ್ಲಿಕ, ಕೆ.ಸುರೇಖ, ಕೆ.ಎಂ.ಪ್ರೇಮ್‍ಕುಮಾರ್, ಹೆಚ್.ಎಂ.ರಮ್ಲಂಬೇಗಂ, ತಿಪ್ಪೇಸ್ವಾಮಿ, ಎಂ.ಎನ್.ಅಶೋಕ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ  ರೋಟರಿ ಉಪರಾಜ್ಯಪಾಲ ಸಿ.ಸಿ.ಸವೀನ್, ರೋಟರಿ ಜನರಲ್ ಲೆಪ್ಟನೆಂಟ್ ಬಿ.ಎಸ್.ಓಂಕಾರ್, ಕಾರ್ಯದರ್ಶಿ ರೋಷನ್ ಡಿಸೋಜ, ಗೋಣಿಬೀಡು ಗ್ರಾಪಂ ಸದಸ್ಯ ಸುಧೀರ್, ವರದೇಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೃಥ್ವಿ, ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷೆ ಗಂಗೂ, ಕಸಾಪ ಹೋಬಳಿ ಅಧ್ಯಕ್ಷ ಸಂಧಿಪ್, ಜೆ.ಎಸ್.ರಘು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News