×
Ad

ಗೌರಿ ಲಂಕೇಶ್ ಹತ್ಯೆ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಮನವಿ

Update: 2017-09-07 17:52 IST

ಮುಂಡಗೋಡ, ಸೆ.7: ಹಿರಿಯ ಪತ್ರಕರ್ತೆ ವಿಚಾರವಾದಿ, ಗೌರಿ ಲಂಕೇಶ್ ಹತ್ಯೆಗೈದವರನ್ನು  ಕೂಡಲೇ ಬಂಧಿಸಬೇಕು ಹಾಗೂ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗೆ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಯಿತು.

ಸಾಹಿತಿ, ವಿಚಾರವಾದಿಯಾಗಿದ್ದ ಗೌರಿ ಲಂಕೇಶ್ ಹತ್ಯೆ ನಿಜಕ್ಕೂ ನೋವುಂಟು ಮಾಡುವುದರ ಜತೆಗೆ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಘಟನೆಯನ್ನು ಮುಂಡಗೋಡ ತಾಲೂಕ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಇತ್ತಿಚಿನ ದಿನಗಳಲ್ಲಿ ಪತ್ರಕರ್ತರ ವಿಚಾರವಾದಿಗಳ ಮೇಲೆ ಹಲ್ಲೆ ಪ್ರಕರಣ ಪದೇ ಪದೇ ನಡೆಯುತ್ತಿದೆ. ಸಮಾಜದ ಸಮಸ್ಯೆಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವ ಅಂಕುಡೊಂಕುಗಳನ್ನು ಎತ್ತಿ ತೋರಿಸುವ ಪತ್ರಕರ್ತರು  ಭಯದಿಂದ ದಿನದೂಡಬೇಕಾದ ಸ್ಥಿತಿ ಉದ್ಭವವಾಗುತ್ತಿದೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೈದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಪತ್ರಕರ್ತರು, ವಿಚಾರವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಈ ಸಂದರ್ಭದಲ್ಲಿ ತಾಲೂಕಾ ಕಾ.ನಿ.ಪತ್ರಸಂಘದ ಅಧ್ಯಕ್ಷ ನಜೀರುದ್ದೀನ ತಾಡಪತ್ರಿ, ಕಾರ್ಯದರ್ಶಿ ಸಂತೋಷ ರಾಯ್ಕರ, ಹಿರಿಯ ಪತ್ರಕರ್ತ ಅಣ್ಣುಕುಮಾರ ಖಟಾವಕರ,ಸಂಪಾದಕ ಶ್ರೀಧರ ಡೋರಿ, ಶಾಂತೇಶ ಬೆನಕನಕೊಪ್ಪ, ರಾಮಸ್ವಾಮಿ ಅಂಡಗಿ, ಬಸವರಾಜ ಲಮಾಣಿ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಪದಾಧಿಕಾರಿಗಳಾದ ಎಲ್.ಟಿ.ಪಾಟೀಲ, ಗೋಪಾಲ ಪಾಟೀಲ, ನಾಗರಾ ಅಂಟಾಳ, ಗಿರೀಶ ಒಣಿಕೇರಿ, ನಾಗರಾಜ ಬೆಣ್ಣಿ, ಹರೀಶ ಭಜಂತ್ರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News