×
Ad

ನಮ್ಮ ಮೆಟ್ರೋಗೆ ಬಸವಣ್ಣ ಹೆಸರಿಡಲು ಆಗ್ರಹ

Update: 2017-09-07 17:58 IST

ಬೆಂಗಳೂರು, ಸೆ.7: ನಮ್ಮ ಮೆಟ್ರೋ ರೈಲಿಗೆ ‘ಬಸವೇಶ್ವರ ಮೆಟ್ರೋ’ ಎಂದು ನಾಮಕರಣ ಮಾಡಬೇಕು ಎಂದು ಶಿವಶಕ್ತಿ ಮಹಿಳಾ ಸಂಘ ಆಗ್ರಹಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಎಚ್.ಆರ್.ಉಮಾದೇವಿ, ಬಿಬಿಎಂಪಿ, ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಹೆಸರಿಡಲಾಗಿದೆ. ಹೀಗಾಗಿ ಮೆಟ್ರೋ ಬಸವಣ್ಣನ ಹೆಸರಿಡಬೇಕೆಂದು ಒತ್ತಾಯಿಸಿದರು.

ಹನ್ನೇರಡನೆ ಶತಮಾನದಲ್ಲಿ ಶರಣರು ಅಸ್ಪಶ್ಯತೆ, ಸ್ತ್ರೀ ಅಸಮಾನತೆ, ಮೂಢನಂಬಿಕೆ ಸೇರಿ ಸಾಮಾಜಿಕ ಅನಿಷ್ಠಗಳ ವಿರುದ್ಧ ಸಿಡಿದೆದ್ದಿದ್ದರು. ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ನಡೆಸಿದ್ದು, ಜನರ ಆಡುಭಾಷೆಯಲ್ಲೆ ವಚನಗಳು ರಚಿಸಿ, ಸಾಮಾಜಿಕ ಚಳವಳಿಗೆ ನಾಂದಿ ಹಾಡಿದ್ದಾರೆಂದು ಅವರು ಹೇಳಿದರು.

ಬಡವರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಚಳವಳಿ ನಡೆಸಿದ ಹಾಗೂ ತಮ್ಮ ವಚನಗಳ ಮೂಲಕ ಸುಭದ್ರವಾದ ಅಡಿಪಾಯ ಹಾಕಿಕೊಟ್ಟ ಬಸವೇಶ್ವರ ಹೆಸರನ್ನು ನಮ್ಮ ಮೆಟ್ರೋಗೆ ಇಡುವುದು ಬಹಳ ಸೂಕ್ತ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News