×
Ad

ಕಡೂರು: ಕಷ್ಟರ್ ಮಟ್ಟದ ಪ್ರತಿಭಾ ಕಾರಂಜಿ

Update: 2017-09-07 22:14 IST

ಕಡೂರು, ಸೆ. 7: ಪ್ರತಿಯೊಬ್ಬ ಮಕ್ಕಳಲ್ಲೂ ಉತ್ತಮ ಪ್ರತಿಭೆ ಇರುತ್ತದೆ. ಅದನ್ನು ಹೊರ ಚೆಲ್ಲಲು ಪ್ರತಿಭಾಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಇಸ್ಮಾಯೀಲ್ ಹೇಳಿದರು.

ಅವರು ಪಟ್ಟಣದ ಉರ್ದು ಹಿರಿಯ ಪ್ರೌಢಶಾಲೆಯಲ್ಲಿ ನಡೆದ ‘ಎ’ ಕಷ್ಟರ್ ಮಟ್ಟದ ಪ್ರೌಢಶಾಲಾ ಮಕ್ಕಳ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಓದಿನ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಆಸಕ್ತಿ ತೋರಬೆಕು. ಇದಕ್ಕೆ ಪೋಷಕರು ಮತ್ತು ಶಿಕ್ಷಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಕೋಟೆ ಮಸೀದಿ ಅಧ್ಯಕ್ಷ ಸೈಯಾದ್ ಯಾಸೀನ್ ಮಾತನಾಡಿ, ಕಡೂರಿನ ಪ್ರತಿಭೆ ವೇದಾಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದು. ಇದೇ ರೀತಿ ಯೋಗಾ ಸ್ಪರ್ಧೆಯಲ್ಲಿ ಪಟ್ಟಣದವರೇ ಆದ ಶಾಲಿನಿ ಅವರು ಕೂಡ ಏಷ್ಯಾಖಂಡದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. ಪ್ರತಿಭೆಗಳು ನಿಮ್ಮಲ್ಲಿಯೂ ಇದೆ ಅದನ್ನು ಈ ಕ್ರೀಡಾಪಟುಗಳ ರೀತಿ ಹೊರಚೆಲ್ಲಿ ಎಂದರು.

ಈ ಸಂದರ್ಭ ಪುರಸಭೆ ನಾಮಿನಿ ಸದಸ್ಯ ಇಕ್ಬಾಲ್, ಆಫ್ರೋಝ್, ಅಬ್ಬು, ಖಲೀಂಮ್, ಮೊಹಮ್ಮದ್‍ ಪಾಷ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಖಮರುನ್ಸಿಸಾ, ಬಾಬು, ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ, ಝರೀನಾ ಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News