ದಸರಾ ದರ್ಬಾರ್ ಮಹೋತ್ಸವಕ್ಕೆ ಹೊರೆ ಕಾಣಿಕೆ ಸಂಗ್ರಹಕ್ಕೆ ಚಾಲನೆ
ಕಡೂರು, ಸೆ. 7: ಪಟ್ಟಣದಲ್ಲಿ ನಡೆಯುವ ದಸರಾ ದರ್ಬಾರ್ ಮಹೋತ್ಸವಕ್ಕೆ ಹೊರೆ ಕಾಣಿಕೆ ಸಂಗ್ರಹ ಮಾಡಲು ನಮ್ಮ ವಾಹನ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ ಎಂದು ಮಹೋತ್ಸವ ಸಮಿತಿ ಕಾರ್ಯದರ್ಶಿ ಹೆಚ್.ಎಂ.ಲೋಕೇಶ್ ತಿಳಿಸಿದರು.
ಅವರು ಗುರುವಾರ ಪಟ್ಟಣದ ದಸರಾ ದರ್ಬಾರ್ ಮಹೋತ್ಸವ ಕಚೇರಿಯ ಮುಂಭಾಗದಲ್ಲಿ ಹೊರೆ ಕಾಣಿಕೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ತಿಂಗಳ ಸೆ. 19 ರಿಂದ ಸೆ. 30 ವರೆಗೆ 10 ದಿನಗಳ ಕಾಲ ಜರುಗಲಿರುವ ದರ್ಬಾರ್ ಮಹೋತ್ಸವದಲ್ಲಿ ಪ್ರತಿ ನಿತ್ಯ ಭಕ್ತಾಧಿಗಳಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿದ್ದು. ಹೊರೆ ಕಾಣಿಕೆಯಾಗಿ ವಸ್ತು ರೂಪದಲ್ಲಿ ಅಕ್ಕಿ, ಬೇಳೆ, ಬೆಲ್ಲ, ತೆಂಗಿನಕಾಯಿ, ಎಣ್ಣೆ ನೀಡಬಹುದು ಎಂದರು.
ಹಣದ ರೂಪದಲ್ಲಿ ದೇಣಿಗೆ ನೀಡುವ ಭಕ್ತರು ವಾಹನದಲ್ಲಿ ಬರುವ ಮುಖ್ಯಸ್ಥರಲ್ಲಿ ಹಣ ನೀಡಿ ರಸೀದಿ ಪಡೆಯಬಹುದಾಗಿದೆ. ಹೊರೆ ಕಾಣಿಕೆ ನೀಡುವವರು ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷರಾದ ಗಿರೀಶ್ 9164734394 ಮತ್ತು ಕಾರ್ಯದರ್ಶಿ ಕೆ.ಆರ್.ಮಹೇಶ್ 9972758505 ಇವರುಗಳನ್ನು ಸಂಪಕಿಸಲು ಕೋರಿದ್ದಾರೆ.
ಈ ಸಂದರ್ಭ ಸಾಣೇಹಳ್ಳಿ ಆರಾಧ್ಯ, ರೇವಣಸಿದ್ದಪ್ಪ, ಸದಾಶಿವಪ್ಪ, ರೇಣುಕಯ್ಯ, ಹೂವಿನಗೋವಿಂದಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶಮೂರ್ತಿ ಉಪಸ್ಥಿತರಿದ್ದರು.