×
Ad

ಕೃಷಿಯಿಂದ ಭಾರತದ ಸಂಸ್ಕೃತಿ ಉಳಿದಿದೆ: ಕೆ.ಟಿ.ಗಂಗಾಧರ್

Update: 2017-09-07 23:09 IST

ತುಮಕೂರು, ಸೆ.7: ಭಾರತದ ಸಂಸ್ಕೃತಿ ಉಳಿದಿರುವುದಾದರೆ ಅದು ಕೃಷಿ ಸಂಸ್ಕೃತಿಯಿಂದ ಮಾತ್ರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ.

ನಗರದ ತುಮಕೂರು ವಿವಿಯ ಸರ್ .ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬದುಕು ಕಮ್ಯುನಿಟಿ ಕಾಲೇಜು, ಅಮೃತ ಭೂಮಿ ಮತ್ತು ಸಿಜ್ಞಾ ಯವ ಸಂವಾದ ಕೇಂದ್ರದ ಆಯೋಜಿಸಿದ್ದ ಇಂದಿನ ಕೃಷಿ ಸಮುದಾಯದ ಸವಾಲುಗಳು ಮತ್ತು ಸಾಧ್ಯತೆಗಳು ಕುರಿತು ಮಾತನಾಡುತಿದ್ದ ಅವರು, ಕೃಷಿ ಸಂಸ್ಕೃತಿ ಇಂದು ಸಂಬಂಧಗಳನ್ನು ಕಟ್ಟಿಕೊಡುವಂತಹ ಕಲೆ ಸಾಹಿತ್ಯ, ಸಂಸ್ಕೃತಿಯ ನಿಜವಾದ ರಾಯಬಾರಿ ಕೃಷಿಕನೇ ಆಗಿದ್ದಾನೆ ಎಂದರು.

ಇಂದಿನ ದಿನಗಳಲ್ಲಿ ಕೃಷಿಯಲ್ಲಿ ಹಲವಾರು ಸಮಸ್ಯಗಳನ್ನು ಎದುರಿಸುತಿದ್ದು, ಕೃಷಿಯಲ್ಲಿ ಹೊಸ ಉಪಕರಣಗಳು ಬಂದಿದ್ದರೂ ಅವು ಅತ್ಯಂತ ಆಪಾಯಕಾರಿಯಾಗಿವೆ. ಇಂದಿನ ಶಿಕ್ಷಣಕ್ಕೂ, ಕೃಷಿಗೂ ಒಂದಕ್ಕೊಂದು ಸಂಬಂಧವಿಲ್ಲದಂತಾಗಿದೆ. ಹೈಬ್ರಿಡ್ ಬೀಜ, ರಸಗೊಬ್ಬರದಿಂದ ಇಳುವರಿಯಲ್ಲಿ ಹೆಚ್ಚಳವಾದರೂ ಅದಕ್ಕೆ ತಕ್ಕದಾಗಿ ಮಾರುಕಟ್ಟೆ ವಿಸ್ತಾರಗೊಳ್ಳಲಿಲ್ಲ. ಇದರ ಪರಿಣಾಮ ಬೆಲೆಗಳು ಇಳಿದು, ರೈತರು ಪರಿತಪಿಸುವಂತಾಗಿದೆ ಎಂದು ತಿಳಿಸಿದರು.

ರೈತ ಬೆಳೆದ ತರಕಾರಿ ಆಹಾರ ಪದಾರ್ಥಗಳು ಬೀದಿ ಬದಿ ಧೂಳಿನ ಕಣಗಳಲ್ಲಿ ಹಾಕಿ ಮಾರುವ ಪರಿಸ್ಥಿತಿ ಎದುರಾಗಿದೆ. ಬೇರೆ ಬೇರೆ ದೇಶಗಳಲ್ಲಿ ನಡೆದ ರೈತ ಹೋರಾಟಗಳಲ್ಲಿ ಭಾಗವಹಿಸಿದ್ದೆನೆ. ದೊಡ್ಡಮಟ್ಟದ ಖಾಯಿಲೆಗಳನ್ನು ಎದುರಿಸಲು ರೈತರು ಶಕ್ತರಾಗಿಲ್ಲ. ಕೃಷಿಗೆ ಸಂಬಂಧಿಸಿದಂತೆ ಹಲವಾರು ವಸ್ತುಗಳು, ಆಹಾರ ಪದಾರ್ಥಗಳು ದೇಶದಿಂದ ದೇಶಕ್ಕೆ ಉಚಿತ ಸರಬರಾಜು ಮಾಡುವುದುರಿಂದ ರೈತನಿಗೆ ಅನ್ಯಾಯವಾಗುತ್ತಿದೆ. ಬೆಳೆದ ಆಹಾರ ಪದಾರ್ಥಗಳು ಬೀದಿಗೆ ಬಿಳುವ ಪರಿಸ್ಥಿತಿ ಎದುರಾಗಿದೆ ಎಂದು ಕೆ.ಟಿ.ಗಂಗಾಧರ್ ಬೇಸರ ವ್ಯಕ್ತಪಡಿಸಿದರು.

ಸಿ.ಯತಿರಾಜು ಮಾತನಾಡಿ, ಹವಾಮಾನ ವೈಪರಿತ್ಯ ಮತ್ತು ಕೃಷಿ ನಡುವಣ ಸಂಬಂಧ ಮತ್ತು ವೈರುದ್ಯಗಳು ಎಂಬ ವಿಚಾರದಲ್ಲಿ ಹಸಿರು ಮನೆವಾತಾವರಣ ಇಲ್ಲದಿದ್ದರೆ ಪರಿಸರ ಅದೋಗತಿ ಆಗುತಿತ್ತು. ಇಂದು ಪರಿಸರದಲ್ಲಿ ವಾಯುಗುಣ ವೈಪರಿತ್ಯಗಳು ಕಂಡು ಬರುತ್ತಿದೆ. ಅಲ್ಲದೆ ಈ ವಾಯುಗುಣ ವೈಪರಿತ್ಯದಿಂದ ಹೊಸ ಹೊಸ ರೋಗ ಉಂಟುಮಾಡುತ್ತಿವೆ ಎಂದರು.

ಚಿತ್ರನಟ, ಸಾವಯವ ರೈತ ಕಿಶೋರ್ ಮಾತನಾಡಿ, ಭಾರತದ ಬೆನ್ನೆಲುಬು ರೈತ, ಮಾರುಕಟ್ಟೆಯಲ್ಲಿ ರೈತರನ್ನು ಆಟದ ದಾಳವನ್ನಾಗಿ ಇಟ್ಟುಕೊಂಡು ಮಾರುವ ಆಟ ಆಡುತ್ತಿದ್ದಾರೆ. ರೈತರನ್ನು ಸಹಾಯ ಧನದ ಮುಖವಾಡ ಹಾಕಿ ಕತ್ತಲೆಗೆ ನೂಕಿ ಭ್ರಮೆಗಳಲ್ಲಿ ಇಟ್ಟಿದ್ದಾರೆ. ಪ್ರತಿಯೊಬ್ಬರು ಸ್ವಾವಲಂಬಿಯಾಗಲು ಗ್ರಾಮ ಸ್ವರಾಜ್ ದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೂಮಕೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಜಯಶೀಲ,ಸಾಯಯವ ರೈತ ಹೋರಾಟಗಾರ್ತಿ ವಿಶಾಲ,ಬದುಕು ಕಮ್ಯನಿಟಿ ಕಾಲೇಜು ಪ್ರಾಂಶುಪಾಲ ಮುರುಳಿ ಮೋಹನ್ ಕಾಟಿ, ಡಾ.ಕೆ,ಜಿ, ಪರಶು ರಾಮ್, ಸಿಜ್ಞಾ ಕೇಂದ್ರದ ಜ್ಞಾನ ಸಿಂಧು ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News