ಶಿಲ್ಪಾ ಶೆಟ್ಟಿ ದಂಪತಿಯ ಚಿತ್ರವನ್ನು ಕ್ಲಿಕ್ಕಿಸಿದ್ದ ಫೋಟೊ ಜರ್ನಲಿಸ್ಟ್‌ಗಳಿಗೆ ಥಳಿತ

Update: 2017-09-08 11:03 GMT

ಮುಂಬೈ,ಸೆ.8: ಗುರುವಾರ ರಾತ್ರಿ ಬಾಂದ್ರಾದ ರೆಸ್ಟೋರಂಟ್‌ವೊಂದರ ಹೊರಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಚಿತ್ರವನ್ನು ಕ್ಲಿಕ್ಕಿಸಿದ್ದಕ್ಕಾಗಿ ಇಬ್ಬರು ಛಾಯಾಚಿತ್ರ ಪತ್ರಕರ್ತ(ಫೋಟೊ ಜರ್ನಲಿಸ್ಟ್)ರ ಮೇಲೆ ತೀವ್ರ ಹಲ್ಲೆ ನಡೆದಿದೆ.

ಶಿಲ್ಪಾ ದಂಪತಿ ತಡರಾತ್ರಿ ರೆಸ್ಟೋರಂಟ್‌ನಲ್ಲಿ ಡಿನ್ನರ್ ಮುಗಿಸಿಕೊಂಡು ಹೊರಕ್ಕೆ ಬರುತ್ತಿದ್ದಾಗ ಕೆಲವು ಛಾಯಾಚಿತ್ರಗ್ರಾಹಕರು ಫೋಟೊಗಳಿಗಾಗಿ ಅವರಿಗೆ ದುಂಬಾಲು ಬಿದ್ದಿದ್ದರು. ದಂಪತಿ ಅವರಿಗೆ ಪೋಸ್‌ವೊಂದನ್ನು ನೀಡಿ ತಮ್ಮ ಕಾರನ್ನು ಹತ್ತಿದ ಬಳಿಕ ರೆಸ್ಟೋರಂಟ್‌ನ ಬೌನ್ಸರ್‌ಗಳು ಛಾಯಾ ಚಿತ್ರಗ್ರಾಹಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೊಟ್ಟೆಗಳಿಗೆ ಬಲವಾಗಿ ಗುದ್ದಿದ್ದಾರೆ. ಸೋನು ಮತ್ತು ಹಿಮಾಂಶು ಶಿಂಧೆ ಹಲ್ಲೆಗೊಳಗಾದ ಫೋಟೊ ಜರ್ನಲಿಸ್ಟ್‌ಗಳಾಗಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಖಾರ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News