ಎಲ್‍ಐಸಿ ವಿಮ ಕಂಪೆನಿ ದೇಶಕ್ಕೆ ಸಾಲ ನೀಡುವ ಅಪತ್ಬಾಂದವ: ಕುಂದೂರು ಅಶೋಕ್

Update: 2017-09-08 12:42 GMT

ಮೂಡಿಗೆರೆ, ಸೆ.8: ಎಲ್‍ಐಸಿ ಸಂಸ್ಥೆಯು ಉಳಿತಾಯಕ್ಕೆ ಪ್ರೇರಣೆ ನೀಡುತ್ತಿದೆ. ದೇಶದ ಬೊಕ್ಕಸಕ್ಕೆ ಸಾಲ ನೀಡುವ ಮಟ್ಟಕ್ಕೆ ಬೆಳೆದಿದ್ದು, ಇದೊಂದು ಅಪತ್ಬಾಂದವ ಸಂಸ್ಥೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದರು. 

ಅವರು ಪಟ್ಟಣದ ಎಲ್‍ಐಸಿ ಕಚೇರಿಯಲ್ಲಿ 61 ನೆ ವರ್ಷದ ವಿಮ ಸಪ್ತಾಹದ ಸಮಾರೂಪ ಸಮಾರಂಭದಲ್ಲಿ ಮಾತನಾಡಿದರು. ಆರ್ಥಿಕ ವ್ಯವಸ್ಥೆಯಲ್ಲಿ ಸಮಸ್ಯೆಯಾದಾಗ ಯಾರು ಸ್ಪಂದಿಸುತ್ತಾರೋ ಅವರನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ. ಇದರಲ್ಲಿ  ಭಾರತೀಯ ಜೀವ ವಿಮಾ ನಿಗಮವು ನಮ್ಮ ಕಣ್ಣ ಮುಂದಿದೆ. ಅಪಘಾತ, ತುರ್ತು ಸಂಧರ್ಭ, ಮಕ್ಕಳ ಮದುವೆ, ವಿದ್ಯಾಭ್ಯಾಸ, ನಿವೃತ್ತಿ, ಮುಂತಾದ ಸಮಯದಲ್ಲಿ ನಾವು ಮಾಡಿದ ವಿಮಾ ಪಾಲಿಸಿಗಳು ನಮ್ಮ ನೆರವಿಗೆ ಬರಲಿದ್ದು ಅಪತ್ಬಾಂದವ ಅಗಿವೆ ಎಂದು ಹೇಳಿದರು.

ಎಜೆಂಟ್‍ಗಳನ್ನು ನಾವು ಪಾಲಿಸಿ ಮಾಡಿಸಲು ಬಂದಾಗ ನಿಕೃಷ್ಟವಾಗಿ ಕಾಣುತ್ತೇವೆ. ಸತತವಾಗಿ ನಮ್ಮೊಂದಿಗೆ ವ್ಯವಹರಿಸಿ, ತಾಳ್ಮೆಯಿಂಧ ವಿಮಾ ಪಾಲಿಸಿ ಮಾಡಿಸುತ್ತಾರೆ. ಅದರೆ ಅದೆ ಪಾಲಿಸಿ ನಮ್ಮ ಕಷ್ಟದಲ್ಲಿ ಉಪಯೋಗಕ್ಕೆ ಬರುತ್ತದೆ. ಇವರುಗಳು ನಮ್ನ ಉಳಿತಾಯಕ್ಕೆ ಪ್ರೆರಣೆಯಾಗಿರುತ್ತಾರೆ. ಈ ಉಳಿತಾಯ ಸಮಾಜ ಮತ್ತು ದೇಶಕ್ಕೆ ಅಗಿರುತ್ತದೆ ಎಂದರು.

60 ವರ್ಷ ಒಂದು ಸಂಸ್ಥೆಯನ್ನು ಕಟ್ಟಿ ಬೇಳೆಸುವುದು ಸುಲಭದ ಮಾತಲ್ಲ. ನಮ್ಮ ದೇಶ ಐಎಂಎಪ್, ವಿಶ್ವಬ್ಯಾಂಕ್‍ಗಳಿಂದ ಸಾಲ ಪಡೆಯುತ್ತಿದೆ. ಅವುಗಳ ಪಟ್ಟಿಯಲ್ಲಿ ಇಂದು ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಎಲ್‍ಐಸಿಯು ಇದ್ದು ದೇಶದ ಬೊಕ್ಕಸಕ್ಕೆ ಸಾಲ ಕೊಡುತ್ತಿದೆ. ನಮ್ಮ ಸದೃಢ ಜೀವನಕ್ಕೆ, ಕುಟುಂಬದ ಅಧಾರಕ್ಕೆ ಪಾಲಿಸಿಗಳು ಅತಿ ಮಹತ್ವ ವಹಿಸುತ್ತಿದ್ದು ಎಲ್ಲಾ ನಾಗರಿಕರು ಕಡ್ಡಾಯವಾಗಿ ಇತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾ ಶಾಲಾ ಮಕ್ಕಳಿಗೆ ಬಹುಮನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಕಾ ವ್ಯವಸ್ಥಾಪಕ ಅನಂದಶಾಸ್ರಿ, ಶ್ರೀಪಾದ್, ಗಂಗಾದರ್, ಅಶೋಕ್‍ಶೇಟ್ಟಿ, ಉತ್ತಮ್ ಹಂತೂರು, ಉಪೇಂದ್ರ ಬೆಟ್ಟಗೇರೆ, ನಾಗರಾಜ್ ಬಾಳೂರು ಮತ್ತಿತರಿದ್ದರು, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News