ಮೂಡಿಗೆರೆ: ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ

Update: 2017-09-08 12:47 GMT

ಮೂಡಿಗೆರೆ, ಸೆ.8: ಗ್ರಾಮೀಣ ಕ್ರೀಡೆಯಲ್ಲಿ ಕೆಸರುಗದ್ದೆ ಆಟ ಅತೀ ಮಹತ್ವ ಪಡೆದಿದ್ದು, ಇದರಿಂದ ಇಡೀ ದೇಹಕ್ಕೆ ಲವಲವಿಕೆ, ಶಕ್ತಿ, ಮತ್ತು ಆರೋಗ್ಯ ದೊರೆಯಲಿದೆ ಎಂದು ಎಂದು ಪಯನೋರ್ ಸ್ಪೋಟ್ಸ್ ಕ್ಲಬ್ ಸದಸ್ಯ ದೀಕ್ಷಿತ್ ಕಣಚೂರು ತಿಳಿಸಿದ್ದಾರೆ. 

ಅವರು ಬಡವನದಿಣ್ಣೆಯ ಚೌಡೇಶ್ವರಿ ದೇವಾಲಯದ ಬಳಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟದ ಸಮಾರೂಪದಲ್ಲಿ ಮಾತನಾಡಿದರು.

ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೇಳೆಸುವ ದೃಷ್ಟಿಯಿಂದ ಕೆಸರುಗದ್ದೆ ಕ್ರೀಡೆಯನ್ನು ನಮ್ಮ ಸಂಸ್ಥೆ ಹಮ್ಮಿಕೊಂಡಿದೆ. ಕೆಸರುಗದ್ದೆಯಲ್ಲಿ ಔಷದಿ ಗುಣಗಳಿದ್ದು ಇದರಲ್ಲಿ ಮುಳುಗಿ ಏಳುವುದರಿಂದ ಸಾಮಾನ್ಯ ಮನುಷ್ಯನು ಕೂಡ ಅನೇಕ ರೋಗಗಳಿಂದ ದೂರವಿರಬಹುದು ಎಂದು ನುಡಿದರು.

ಗದ್ದೆಯಲ್ಲಿ ಕೃಷಿ ಮಾಡುವ ಅನ್ನದಾತ ರೈತ ಈ ದೃಷ್ಟಿಯಿಂದಲೆ ಅನೇಕ ರೋಗ-ರುಜೀನಗಳಿಂದ ದೂರವಾಗಲು ಮತ್ತು ದೀರ್ಘಾಯುಷಿ ಆಗಲು ಈ ನೆಲದ ಕೆಸರಿನ ಮಹತ್ವವನ್ನು ಜನಸಮಾನ್ಯರಿಗೆ ತಲುಪಿಸಲು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೆಸರು ಗದ್ದೆ ಕ್ರೀಡೆಗಳನ್ನು ಹಿಂದಿನಿಂದಲೂ ಪೋಷಿಸಿಕೊಂಢು ಬರಲಾಗುತ್ತಿದೆ. ಇಂದು ನಗರದ ಯುವಕರನ್ನು ಈ ಕ್ರೀಡೆಯತ್ತ ಅಕರ್ಷಿಸುವಂತೆ ಮಾಡಲು ಜಿಲ್ಲಾಮಟ್ಟದ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ ಮತ್ತು ಕೆಸರುಗದ್ದೆ ಕ್ರಿಕೆಟ್ ಆಯೋಜಿಸಲಾಗಿದೆ ಎಂದು ತಿಳಿಸಿದರು. 

ಬೆಂಗಳೂರಿನ ‘ಕಾಣದ ಕಡಲೊಳು’ ಚಿತ್ರತಂಡ ಸೇರಿದಂತೆ ಜಿಲ್ಲೆಯ ಅನೇಕ ತಂಡಗಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದವು. ಕೆಸರುಗದ್ದೆ ಕ್ರಿಕೆಟ್‍ನಲ್ಲಿ ಕೆಸವಳಲು ತಂಡ ಪ್ರಥಮ, ಕಣಚೂರು ದ್ವಿತೀಯ, ಹಗ್ಗ-ಜಗ್ಗಾಟದಲ್ಲಿ ಬಿಳಾಲ್‍ಕೊಪ್ಪ ಬಾಳೆಹೊನ್ನೂರು ಪ್ರಥಮ, ಶಭರಿ ಬಣಕಲ್ ದ್ವೀತಿಯ ಸ್ಥಾನಗಳಿಸಿದವು.  ಟ್ರೋಪಿ ಮತ್ತು ನಗದು ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಚ್.ಕೆ.ಯೋಗೇಶ್ ವಹಿಸಿದ್ದರು. ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್, ಜೆಸಿಐನ ನಯನ ಕಣಚೂರು, ಜಯಪಾಲ್ ಬಿದರಗಳ್ಳಿ, ರವಿ ಭಡವನದಿಣ್ಣೆ, ಶಿವು ಪಲ್ಗುಣಿ, ಸದಸ್ಯರಾದ ಪ್ರಹ್ಲಾದ್, ನಿತಿನ್, ನವೀನ್, ಅಶಿಕ್, ಅಜೀತ್, ಸಂತೋಷ್, ಅರುಣ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News