×
Ad

ರಾಹುಲ್ ಗಾಂಧಿಯನ್ನು ಎಸ್‍ಐಟಿ ವಿಚಾರಣೆಗೆ ಒಳಪಡಿಸಿ: ಸಿ.ಟಿ.ರವಿ

Update: 2017-09-08 19:14 IST

ಚಿಕ್ಕಮಗಳೂರು, ಸೆ.8: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಡಿ.ಎನ್.ಜೀವರಾಜ್‍ರನ್ನು ಎಸ್‍ಐಟಿ ತನಿಖಾ ತಂಡ ವಿಚಾರಣೆ ನಡೆಸಲಿ ಎಂಬ ಗೃಹ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ತನಿಖಾ ತಂಡಕ್ಕೆ ಯಾರನ್ನು ಬೇಕಾದರೂ ವಿಚಾರಣೆ ಮಾಡುವ ಹಕ್ಕಿದೆ. ಶಾಸಕ ಜೀವರಾಜ್ ವಿವಾದಾತ್ಮಕ ಹೇಳಿಕೆ ಸಂಬಂಧ ಅವರನ್ನು ವಿಚಾರಣೆ ನಡೆಸಲಿ. ನಮಗೇನು ಬೇಜಾರಿಲ್ಲ ಎಂದು ಹೇಳಿದರು. 

ಅದೇ ರೀತಿ ರಾಹುಲ್ ಗಾಂಧಿ ಕೂಡ ಗೌರಿ ಲಂಕೇಶ್ ಹತ್ಯೆಯಲ್ಲಿ ಆರೆಸ್ಸೆಸ್ ಕೈವಾಡ ಇದೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಇದೆ ವಿಚಾರವಾಗಿ ರಾಹುಲ್ ಗಾಂಧಿಯನ್ನು ಕೂಡ ಎಸ್‍ಐಟಿ ತಂಡ ವಿಚಾರಣೆ ನಡೆಸಲಿ. ಕಾನೂನು ರಾಹುಲ್ ಗಾಂಧಿ, ಜೀವರಾಜ್ ನನಗೂ ಸೇರಿದಂತೆ ಎಲ್ಲರಿಗೂ ಒಂದೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News