ಸಾಲ ಬಾಧೆ: ರೈತ ಆತ್ಮಹತ್ಯೆ
ಮದ್ದೂರು, ಸೆ.8: ಸಾಲಬಾಧೆ, ಬೆಳೆನಷ್ಟದಿಂದ ಬೇಸತ್ತ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾಲಗಾರನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಮರಿಚನ್ನೇಗೌಡ ಅಲಿಯಾಸ್(65) ಸಾವನ್ನಪ್ಪಿದ ರೈತನಾಗಿದ್ದು, ಇವರು ಮಧ್ಯಾಹ್ನ ತನ್ನ ಜಮೀನಿನ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡು ಅಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂವರೆ ಎಕರೆ ಜಮೀನು ಹೊಂದಿದ್ದ ಮರಿಚನ್ನೇಗೌಡ, ಭತ್ತ, ಕಬ್ಬು, ರೇಷ್ಮೆ, ಬೆಳೆದಿದ್ದು, ಬರದ ಹಿನ್ನೆಲೆಯಲ್ಲಿ ಬೆಳೆ ಹೊಣಗಿ ಅಪಾರ ನಷ್ಟ ಹೊಂದಿದ್ದರು. ಇದರಿಂದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.
ಮದ್ದೂರಿನ ಎಸ್‍ಬಿಐ ಶಾಖೆಯಲ್ಲಿ 4 ಲಕ್ಷ ರೂ. ಮತ್ತು 3.5 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದ ಮರಿಚನ್ನೇಗೌಡ ಪತ್ನಿ ಮುತ್ತಮ್ಮ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.