ರೈತರು ಕೃಷಿ ಮಾಹಿತಿ ಪಡೆದು ಉತ್ತಮ ಬೆಳೆ ಪಡೆಯಬೇಕು: ಎಚ್.ಕೆ.ಪೂರ್ಣೇಶ್
ಮೂಡಿಗೆರೆ, ಸೆ.10: ರೈತರು ಕೃಷಿಯಲ್ಲಿ ಸಾಧಕರಾಗಿ ಮೂಡಿ ಬರಬೇಕಾದರೆ ಕೃಷಿ ಮಾಹಿತಿ ಪಡೆದು ಉತ್ತಮ ಬೆಳೆ ಪಡೆಯಬೇಕು ಎಂದು ಜಿಹೊಸಳ್ಳಿ ಬೈರವೇಶ್ವರ ರೈತ ಕೂಟದ ಅಧ್ಯಕ್ಷ ಎಚ್.ಕೆ.ಪೂರ್ಣೇಶ್ ಹೇಳಿದರು.
ಅವರು ಭಾನುವಾರ ಜಿ.ಹೊಸಳ್ಳಿ ಗ್ರಾಮದ ಜಿ.ರಾಜೇಗೌಡ ಮನೆಯ ಆವರಣದಲ್ಲಿ ನಡೆದ ಕೃಷಿಕರಿಗೆ ಅರಿವು ಹಾಗೂ 8ನೆ ವರ್ಷದ ಜೆಸಿ ಉತ್ಸವ 2017 ಸ್ನೇಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಎಲ್ಲರಿಗೂ ಹೊಂದುವುದಿಲ್ಲ. ಮಣ್ಣಿನ ಗುಣವೇ ಅಂತಾದ್ದು, ಕೆಲವರಿಗೆ ಒಗ್ಗಿದರೆ, ಇನ್ನು ಕೆಲವರಿಗೆ ಒಗ್ಗುವುದಿಲ್ಲ. ಮಳೆ ಆಶ್ರಿತ, ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಉತ್ತಮ ಇಳುವರಿ ಪಡೆಯಲು ಕೃಷಿ ಮಾಹಿತಿ ಪಡೆಯುವುದು ಸೂಕ್ತವಾದ ಸಲಹೆಯಾಗಿದೆ ಎಂದು ನುಡಿದರು.
ಜೆಸಿ ಸ್ಥಾಪಕ ಅಧ್ಯಕ್ಷ ಡಾ. ಮೋಹನ್ ರಾಜಣ್ಣ ಮಾತನಾಡಿ, ವೈಜ್ಞಾನಿಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ತಜ್ಞರಿಂದ ಸರಿಯಾದ ಮಾಹಿತಿಗಳನ್ನು ಪಡೆದು ಕೃಷಿ ಕಾರ್ಯಗಳನ್ನು ಸುಲಭವಾಗಿಸು ಮೂಲಕ ಲಾಭದಾಯಕವಾಗಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ತಿಕ್ ಮಂಜುನಾಥ್ ಮಾತನಾಡಿ, ಕೃಷಿಕರಿಗೆ ಕಾಫಿ ಮತ್ತು ಕಾಳು ಮೆಣಸು ಪೋಷಕಾಂಶ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ರೈತರು ಭಾಗವಹಿಸಿದ್ದರು. ಜೆಸಿ ಅಧ್ಯಕ್ಷ ಎಚ್.ಸಿ.ತೇಜಸ್ ಅಧ್ಯಕ್ಷತೆ ವಹಿಸಿದ್ದರು.
ಶಿವಕುಮಾರ್, ಮಂಜುನಾಥ್, ಸಂಯೋಜಕ ಕೆ.ಡಿ.ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸುಬ್ಬಣ್ಣ, ಯೋಗೇಶ್ ಕುಮಾರ್, ಜಿ.ಆರ್.ಪರಮೇಶ್, ಮುಹಮ್ಮದ್ ಮುನಾವರ್, ಕೃಷಿ ತಾಂತ್ರಿಕ ಅಧಿಕಾರಿ ಕು.ಪವಿತ್ರ, ಗಣೇಶ್ ಗೌಡ, ವೈ.ಬಿ.ಸುಂದರೇಶ್, ಸಂತೋಷ್, ಹರೀಶ್, ರಮೇಶ್, ದೀಪಕ್, ಆದರ್ಶ, ಶೇಷೇಗೌಡ ಮತ್ತಿತರರಿದ್ದರು.