×
Ad

ನಾಗಮಂಗಲ: ಪ್ರಯಾಣಿಕ ಮೃತ್ಯು

Update: 2017-09-10 23:14 IST

ನಾಗಮಂಗಲ, ಸೆ.10: ಕಾರ್ಯನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಕಲ್ಕೆರೆ ಗ್ರಾಮದ ತಿಮ್ಮಶೆಟ್ಟಿ ಅವರ ಪುತ್ರ ರಂಗಸ್ವಾಮಿ(45) ಎಂಬವರು ರವಿವಾರ ಬಸ್ ನಿಲ್ದಾಣದಲ್ಲಿ ಸಾವನ್ನಪ್ಪಿದ್ದಾರೆ.

ವೃತ್ತಿಯಲ್ಲಿ ಫೋಟೊ ಗ್ರಾಫರ್ ಅಗಿರುವ ರಂಗಸ್ವಾಮಿ ಅವರು ನಾಗಮಂಗಲ ಪಟ್ಟಣದಲ್ಲಿ ನಡೆಯುತ್ತದ್ದ ಮದುವೆ ಕಾರ್ಯಕ್ಕೆ ಶನಿವಾರ ತಡರಾತ್ರಿ ತನ್ನ ಸಹಾಯಕನನ್ನು ಕಳುಹಿಸಿ, ತಾನು ರವಿವಾರ ಬೆಳಗ್ಗೆ ಆಗಮಿಸಿದಾಗ ಮೃತಪಟ್ಟಿದ್ದಾರೆ.

ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಸಾರಿಗೆ ಬಸ್ ಇಳಿದ ರಂಗಸ್ವಾಮಿ, ಸುಸ್ತಾಗಿ ಪ್ರಯಾಣಿಕರ ತಂಗುದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮೃತಪಟ್ಟರೆಂದು ಹೇಳಲಾಗಿದೆ. ವಿಷಯ ತಿಳಿದ ಕುಟುಂಬದವರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ಪಡೆದುಕೊಂಡರು.

ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News