×
Ad

ವಲಯ ಮಟ್ಟದ ರಸಪ್ರಶ್ನೆ, ಕವ್ವಾಲಿ ಸ್ಪರ್ಧೆ: ಪ್ರಿಯದರ್ಶಿನಿ ವಿದ್ಯಾ ಕೇಂದ್ರಕ್ಕೆ ಪ್ರಥಮ ಸ್ಥಾನ

Update: 2017-09-11 17:37 IST

ಹನೂರು, ಸೆ.11: ತಾಲೂಕಿನ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಆಯೋಜಿಸಿದ್ದ ವಲಯ ಮಟ್ಟದ ರಸಪ್ರಶ್ನೆ ಮತ್ತು ಕವ್ವಾಲಿ ಸ್ಪರ್ಧೆಯಲ್ಲಿ  ಅಜ್ಜಿಪುರ ಗ್ರಾಮದ ಪ್ರಿಯದರ್ಶಿನಿ ವಿದ್ಯಾ ಕೇಂದ್ರದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. 

ವಿದ್ಯಾರ್ಥಿಗಳಾದ ಮುಷರಪ್ ಪಾಶ, ಶಬರೀಶ್, ನಿತ್ಯ, ಐಶ್ವರ್ಯಬಾಯಿ, ಬೀಬಿ ಕುಲ್ಸುಮ್, ಕುಮಾರ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದರೆ, ಕವ್ವಾಲಿ ಸ್ಪರ್ದೆಯಲ್ಲಿ ಅಲ್ವಿಯಾ ಕೌಸರ್, ಮಬೀನಾಬಾನು, ಮಪಾಸಿರ ತಸ್ಕಿನ್, ಐಶಾಬಿ, ಸುಮನ್ ಬಾನು ಪ್ರಥಮ ಸ್ಥಾನ ಹಾಗೂ ಧಾರ್ಮಿಕ ಪಠಣ ವಿಭಾಗದಲ್ಲಿ ಅಲ್ವಿಯಾ ಕೌಸರ್ ದ್ವಿತೀಯ ಸ್ಥಾನಗಳಿಸಿ ನಮ್ಮ ಪ್ರಿಯದರ್ಶಿನಿ ಶಾಲೆಗೆ ಕೀರ್ತಿತಂದಿದ್ದಾರೆ ಎಂದು ವಿದ್ಯಾಕೇಂದ್ರದ ಕಾರ್ಯದರ್ಶಿ ಸೋಮಶೇಖರ್ ಹಾಗೂ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News