×
Ad

ಉಚಿತ ಆರೋಗ್ಯ ತಮಾಸಣೆ ಶಿಬಿರದಿಂದ ಬಡವರಿಗೆ ಅನುಕೂಲ: ಎ.ಸಿ.ಅಯೂಬ್

Update: 2017-09-11 20:17 IST

ಮೂಡಿಗೆರೆ, ಸೆ.11: ಕಣ್ಣಿನ ದೃಷ್ಟಿ ದೋಷದಿಂದ ಬಳಲುತ್ತಿರುವವರ ದೋಷವನ್ನು ನಿವಾರಿಸಲು ತಪಾಸಣೆ ಮೂಲಕ ದೃಷ್ಟಿ ಯನ್ನು ಮರಳುವಂತೆ ಮಾಡಿದಾಗ ದೃಷ್ಟಿ ದೋಷದಂತಹ ತೊಂದರೆಯಿಂದ ಮುಕ್ತರಾಗಬಹುದು ಎಂದು ಮಲೆನಾಡು ಮುಸ್ಲಿಂ ವೇದಿಕೆ ಉಪಾಧ್ಯಕ್ಷ ಎ.ಸಿ.ಅಯೂಬ್ ಹಾಜಿ ಹೇಳಿದರು. 

ಅವರು ಸೋಮವಾರ ಪಟ್ಟಣದ ಜೆಸಿ ಭವನದಲ್ಲಿ ಜೆಸಿಐ ಸಪ್ತಾಹದ ಅಂಗವಾಗಿ ಜೆಸಿಐ ಸಂಸ್ಥೆ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಹಾಗೂ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯರು ಅರ್ಧ ಭಾಗ ವಯಸ್ಸು ಕಳೆದಾಗ ಕಣ್ಣಿನ ದೃಷ್ಟಿ ದೋಷ ಪ್ರಾರಂಭವಾಗುತ್ತದೆ. ನಂತರ ಕಣ್ಣು ಕಾಣದ ಸ್ಥಿತಿಯು ನಿರ್ಮಾಣವಾಗಬಹುದು. ಬಡ ವರ್ಗದಿಂದ ಬಂದವರು ದೊಡ್ಡಮಟ್ಟದ ಆಸ್ಪತ್ರೆಗೆ ತೆರಳಿ ಕಣ್ಣಿನ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇರುತ್ತದೆ. ಅಂತವರಿಗೆ ಸಂಘ ಸಂಸ್ಥೆಗಳು ಚಿಕಿತ್ಸೆ ಕೊಡಿಸಿದಾಗ ಅಂತಹ ಸಂಘ ಸಂಸ್ಥೆಗಳ ಉದ್ದೇಶಗಳು ಈಡೇರಿದಂತಾಗುತ್ತದೆ ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಜೆಸಿಐ ಸಂಸ್ಥೆ ಅಧ್ಯಕ್ಷ ನಯನ ಕಣಚೂರು ಮಾತನಾಡಿ, ಪ್ರತೀ ವರ್ಷವೂ ಜೆಸಿಐ ಸಪ್ತಾಹದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸಮಾಜ ಸೇವೆ ಮಾಡಲು ಸಪ್ತಾಹ ಸಹಕಾರಿಯಾಗಿದೆ. ಪ್ರತೀ ವರ್ಷವೂ ಬೇರೆ ಬೇರೆ ರೀತಿಯ ಜನಪರ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವುದರಿಂದ ಬಡ ವರ್ಗದ ಜನರ ಕಷ್ಟ ಸುಖದಲ್ಲಿ ಜೇಸಿಐ ಸಂಸ್ಥೆ ಪಾಲ್ಗೊಳ್ಳುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಈ ವೇಳೆ ಮಂಗಳೂರಿನ ಖಾಸಗಿ ಕಣಚೂರು ಆಸ್ಪತ್ರೆ ಸಹಯೋಗದಲ್ಲಿ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಎಂಜಿಎಂ ಸರಕಾರಿ ಆಸ್ಪತ್ರೆ ವತಿಯಿಂದ ರಕ್ತ ದೊತ್ತಡ ಮತ್ತು ಮಧುಮೇಹ ಚಿಕಿತ್ಸಾ ಶಿಬಿರ ನಡೆಯಿತು. ಶಿಬಿರದಲ್ಲಿ ನೋರಾರು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮಲೆನಾಡು ಮುಸ್ಲಿಂ ವೇದಿಕೆ ವತಿಯಿಂದ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಯು.ಎನ್.ಚಂದ್ರೇಗೌಡ, ಸಿ.ಕೆ.ಇಬ್ರಾಹೀಂ, ಮೋಹನ್ ಲಾಲ್ ಜೈನ್, ಯಾಕೂಬ್ ಗೋಣಿಗದ್ದೆ, ಕಣಚೂರು ಆಸ್ಪತ್ರೆ ಮೇಲ್ವಿಚಾರಕ ಮಹಮ್ಮದ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಆರ್.ನಾಗರತ್ನ, ಕಾರ್ಯಕ್ರಮದ ನಿದೇರ್ಶಕ ಹೆಚ್.ಕೆ.ಯೋಗೇಶ್, ಜೇಸಿಐ ಸಂಸ್ಥೆಯ ಕಾರ್ಯದರ್ಶಿ ಶಶಿಕಿರಣ್, ವಿಶುಕುಮಾರ್, ವಿನೋದ್‍ಶೆಟ್ಟಿ, ಮಂಜುನಾಥ್, ದಿಲೀಪ್, ಬಸವರಾಜು, ಜೇಸಿರೇಟ್ ಅಧ್ಯಕ್ಷೆ ಸ್ಪೂರ್ತಿ ನಯನ, ಸುಚಿತ್ರ ಪ್ರಸನ್ನ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News