ಅನೈತಿಕ ಸಂಬಂಧ: ಯುವಕನ ಹತ್ಯೆ
Update: 2017-09-11 20:31 IST
ಶಿವಮೊಗ್ಗ, ಸೆ.11: ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೇಂಟರ್ ಕೆಲಸ ಮಾಡಿಕೊಂಡಿದ್ದ ಆಲ್ಕೊಳ ನಿವಾಸಿ ಚಂದ್ರ (30) ಕೊಲೆಯಾದ ಯುವಕ.
ಈತ ತನ್ನ ಪರಿಚಯದ ಕಳಸ ಸೂರಿ ಎಂಬವವನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಭಾನುವಾರ ಸಂಜೆ ಬೊಮ್ಮನಕಟ್ಟೆಯ ಅರುಣ್ ಮತ್ತು ಸೂರಜ್ ಕಲ್ಲುಗಂಗೂರ ನಿರ್ಜನ ಪ್ರದೇಶಕ್ಕೆ ಚಂದ್ರನನ್ನು ಕರೆದೊಯ್ದು ಮದ್ಯ ಕುಡಿಸಿ, ಅಮಲಿನಲ್ಲಿದ್ದ ಚಂದ್ರನನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ. ಬಳಿಕ ಕೊಲೆ ಮಾಡಿದ ಸೂರಿ ವಿನೋಬನಗರ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ವಿನೋಬ ನಗರ ಠಾಣೆಯ ಇನ್ ಸ್ಪೆಪೆಕ್ಟರ್ ರಾಘವೇಂದ್ರ ಕಂಡಿಕೆ ಸಿಬ್ಬಂದಿಗಳಾದ ಜಗದೀಶ್ ಶಿವಪ್ಪ ಸುರೇಶ್ ಚಂದ್ರು ಪಾಲ್ಗೊಂಡಿದ್ದರು.