ಶಿವಮೊಗ್ಗ: ರೈಲಿನ ಹಳಿಗೆ ಸಿಲುಕಿ ಯುವಕ ಮೃತ್ಯು
ಶಿವಮೊಗ್ಗ, ಸೆ.11: ರೈಲಿನ ಹಳಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದ ಲಕ್ಷ್ಮೀ ನಾರಾಯಣ ರೈಸ್‍ಮಿಲ್ ಹಿಂಭಾಗದ ರೈಲ್ವೆ ಹಳಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ಮೃತನ ಹೆಸರು, ವಿಳಾಸ ಮತ್ತೀತರ ವಿವರಗಳು ಲಭ್ಯವಾಗಿಲ್ಲ. ಸರಿಸುಮಾರು 30 ರಿಂದ 35 ವರ್ಷ ವಯೋಮಾನದವನಾಗಿದ್ದು, ಐದೂವರೆ ಅಡಿ ಎತ್ತರವಿದ್ದಾನೆ. ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ ಹೊಂದಿದ್ದಾನೆ. ಆಕಾಶ ಬಣ್ಣದ ತುಂಬು ತೋಳಿನ ರೆಡಿಮೇಡ್ ಶರ್ಟ್, ಬಾದಾಮಿ ಬಣ್ಣದ ಜೀನ್ಸ್ ಪ್ಯಾಂಟ್, ನಶೆ ಬಣ್ಣದ ಒಳ ಉಡುಪು ಧರಿಸಿದ್ದಾನೆ. ಬಲಗೈ ಮೇಲೆ ಸುಬ್ರಹ್ಮಣ್ಯ ಸ್ವಾಮಿ ತ್ರಿಶೂಲದ ಹಚ್ಚೆ ಗುರುತಿದೆ. ಕರಿದಾರ, ಖಡ್ಗದ ಬಳೆಯಿದೆ. ಎಡಗೈನಲ್ಲಿ 'ವಿ' ಆಕಾರದ ಹಚ್ಚೆ ಗುರುತಿದೆ. ರೈಲಿನ ಚಕ್ರಕ್ಕೆ ಸಿಲುಕಿ ಯುವಕನ ರುಂಡ - ಮುಂಡ ಬೇರ್ಪಟ್ಟಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸ್ ಠಾಣೆ ಸಬ್ ಇನ್ ಸ್ಪೆಪೆಕ್ಟರ್ ಶೇಖರ್‍ರವರು ಭೇಟಿಯಿತ್ತು ಪರಿಶೀಲಿಸಿದರು.
ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಠಾಣೆಯ ದೂರವಾಣಿ ಸಂಖ್ಯೆ : 08182 - 222974 ಗೆ ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.