ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ
ಹನೂರು, ಸೆ.11: ನರೇಗಾಯೋಜನೆಯಡಿ2017-18ನೆ ಮಾದಲ ಅವಧಿಯಲ್ಲಿ 36 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು 17 ರೂ.ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಾಲೂಕು ಸಂಯೋಜಕ ಮನೋಹರ್ ಮಾಹಿತಿ ನೀಡಿದರು.
ಕ್ಷೇತ್ರದ ವ್ಯಾಪಿಯ ಮಲೈಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 2017-18ನೇ ಸಾಲಿನ ಮಾದಲಿನ ಸುತ್ತಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನನಾ ಸಭೆಯಲ್ಲಿ ಮಾತನಾಡಿದ ಅವರು, ನರೇಗಾಯೋಜನೆಯಡಿ ಉದ್ಯೋಗ ಕೇಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಈ ಯೋಜನೆಯಡಿ ಉದ್ಯೋಗ ಪಡೆದ ಪ್ರತಿಯೊಬ್ಬರಿಗೂ ಪ್ರತಿದಿನ ರೂ.224 ದಿನಗೂಲಿ ನೀಡಲಾಗುತ್ತಿದೆ. ಒಂದೊಮ್ಮೆಗ್ರಾಮಸ್ಥರು ಉದ್ಯೋಗ ಕೇಳಿಯೂ ಪಂಚಾಯತ್ ವತಿಯಿಂದ ಉದ್ಯೋಗ ನೀಡಲಾಗದಿದ್ದ ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.
ನರೇಗಾ ಯೋಜನೆಯಡಿ 6 ತಿಂಗಳ ಅವಧಿಯಲ್ಲಿ 36ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 1767391 ಲಕ್ಷ ರೂ. ಖರ್ಚು ಮಾಡಲಾಗಿದ್ದು, 946342 ಲಕ್ಷ ಕೂಲಿ ಪಾವತಿಮಾಡಲಾಗಿದ್ದು, ಸಾಮಾಗ್ರಿಗಳಿಗಾಗಿ 821049 ಲಕ್ಷ ರೂ.ಖರ್ಚು ಮಾಡಲಾಗಿದೆ. ಈ ಸಂಬಂಧ 5ಜನರ ಪರಿಶೋಧಕರ ತಂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೂ ತೆರಳಿ ಕಾಮಗಾರಿಗಳ ಲೋಪದೋಷ ಮತ್ತು ಅಹವಾಲುಗಳು ಹಾಗೂ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದರು.
ಗ್ರಾಮಸ್ಥರಿಂದ ದೂರು: ಇದೇ ವೇಳೆಮಹದೇಶ್ವರ ಬೆಟ್ಟದಿಂದ ಗೋರಸಾಣೆ ಹಾಗೂ ಕೂಂಗುನೂರು ಸಂಪರ್ಕಿಸುವ ರಸ್ತೆಯು ಹದಗೆಟ್ಟಿದ್ದು. ಸಂಪೂರ್ಣ ಗುಂಡಿಗಳಿಂದ ಕೂಡ್ಡಿದ್ದು ಕಳೆದ ವಾರಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ರಸ್ತೆಯಲ್ಲೂ ಕೆಸರನಿಂದ ಕೂಡಿದ್ದು . ಈ ಮಾರ್ಗದಲ್ಲಿ ಸಂಚರಿಸಲು ಸಂಚರಿಸಲು ತುಂಬಾ ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೂಂಡರು. ಅಲ್ಲದೆ, ಹಾಗೂ ಮಹದೇಶ್ವರಬೆಟ್ಟದ ಜನತಾ ಕಾಲನಿಯಲ್ಲಿ ನಿರ್ಮಿಸಿರುವ ಕಾಂಕ್ರೆಟ್ ರಸ್ತೆಯೂ ನಿರ್ಮಿಸಿದ ಒಂದು ವರ್ಷದ ಅವಧಿಯಲ್ಲಿಯೇ ದುರಸ್ಥಿಗೆ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರುಕ್ಮಣಿ, ಮಹೇಶ್, ನೂಡಲ್ ಅಧಿಕಾರಿ ಪ್ರಸಾದ್, ಪಿಡಿಒ ರಾಜೇಶ್, ಸೇಲ್ವಕುಮಾರ್ ಮಹದೇವಮ್ಮ ,ಮಾದೇವಿ, ಮುರುಗ ,ಕುಮಾರ್ , ನಾಗಣ್ಣ ಹಾಗೂ ಇನ್ನಿತರರು ಹಾಜರಿದ್ದರು.