ಬಾಲಕಿ ಮೇಲೆ ಅತ್ಯಾಚಾರ: ಐವರು ಆರೋಪಿಗಳ ಬಂಧನ
ಚಿಕ್ಕಮಗಳೂರು, ಸೆ.11: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ವೀಡಿಯೊ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿರುವ ಘಟನೆ ಸೋಮವಾಋ ನಡೆದಿದೆ.
ನಗರದ ಕೆಂಪನಹಳ್ಳಿ ಬಡಾವಣೆಯ ಚಂದನ್(19), ಮನು(18), ಚಂದ್ರಕಟ್ಟೆ ಎಂಬಲ್ಲಿನ ಕೆ.ಕೆ.ದರ್ಶನ್(19) ಸಹಿತ ಇಬ್ಬರು 17 ವರ್ಷದ ಆಪ್ರಾಪ್ತ ಬಾಲಕರು ಸೇರಿದಂತೆ 5 ಮಂದಿ ಬಂಧಿತರಾಗಿದ್ದಾರೆ.
ಆರೋಪಿಗಳಲ್ಲಿ ಚಂದನ್ ಎಂಬಾತ ಸೆ.6ರಂದು ರಾತ್ರಿ ಕೆಂಪನಹಳ್ಳಿಯ ಅಪ್ರಾಪ್ತ ಬಾಲಕಿಯನ್ನು ಸ್ನೇಹಿತರೊಂದಿಗೆ ಪುಸಲಾಯಿಸಿ ರತ್ನಗಿರಿ ಬಡಾವಣೆಯ ಪಾಳು ಮನೆಯೊಂದರ ಬಳಿ ಕರೆದೊಯ್ದು ಬಲವಂತದಿಂದ ಅತ್ಯಾಚಾರ ಎಸಗಿದ್ದ. ಅರಾಪ್ತ ಬಾಲಕಿಯನ್ನು ಆರೋಪಿ ಚಂದನ್ ಮತ್ತು ಇನ್ನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಅತ್ಯಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ಅಪ್ರಾಪ್ತ ಬಾಲಕಿಯು ಆರೋಪಿಗಳಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಳು. ಆದರೆ ಘಟನೆಯ ವಿಚಾರವನ್ನು ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ಮರುದಿನ ಆರೋಪಿಗಳಲ್ಲಿ ಅಪ್ರಾಪ್ತನೋರ್ವನು ಅಪ್ರಾಪ್ತ ಬಾಲಕಿಗೆ 2 ಸಾವಿರ ರೂ.ಗಳನ್ನು ಕೊಡದಿದ್ದರೆ ಅತ್ಯಾಚಾರ ಎಸಗಿದ್ದನ್ನು ವೀಡಿಯೋ ಮಾಡಿದ್ದು, ಅದನ್ನು ನೆಟ್‍ಗೆ ಹಾಕುವುದಾಗಿ ಹೆದರಿಸಿದ್ದ. ನಂತರ ಪುನಃ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಲ್ಲದೇ ವೀಡಿಯೋ ಚಿತ್ರೀಕರಣವನ್ನು ನಡೆಸಿದ್ದರು ಎನ್ನಲಾಗಿದೆ.
ಸೋಮವಾರ ದಸ್ತಗಿರಿ ಮಾಡಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಸಕಾಲದಲ್ಲಿ ಯಶಸ್ವಿಯಾಗಿ ದಸ್ತಗಿರಿ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಶ್ಲಾಘಿಸುವ ಮೂಲಕ 5 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ನಗರ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್ ಮತ್ತು ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಗಿರೀಶ್ ಕುಮಾರ್ ನೇತೃತ್ವದ ಸಿಬ್ಬಂದಿಗಳಾದ ಸತೀಶ್, ಮಂಜುನಾಥ ನಾಯ್ಕ, ಹಾಲಪ್ಪ, ರಮೇಶ್, ಮತ್ತು ಎಂ.ಇ.ವಿಶ್ವನಾಥ್ ಪ್ರಕರಣದ ಕಾರ್ಯಾಚರಣೆ ನಡೆಸಿದ್ದಾರೆ