ಚಾಮರಾಜನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ವಿ ಸೋಮ್ಮಣ್ಣ ನೇಮಕ
ಹನೂರು,ಸೆ.12 :ವಿಧಾನ ಪರಿಷತ್ ಸದಸ್ಯ ವಿ ಸೋಮ್ಮಣ್ಣರವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನದ ಜೊತೆಗೆ ಚಾಮರಾಜನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ನೇಮಕಮಾಡಿ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಹನೂರು ಬಿಜೆಪಿ ಕಾರ್ಯಕರ್ತರು ಹಾಗೂ ವಿ ಸೋಮ್ಮಣ್ಣರವರು ನೂರಾರು ಅಭಿಮಾನಿಗಳು ಹನೂರಿನ ಖಾಸಗಿ ಬಸ್ ನಿಲ್ಧಾಣದಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಿಹಿ ವಿತರಣೆ ಮಾಡಿ ಸಂಭ್ರಮಾಚರಣೆ ನಡೆಸಿದರು.
ನಂತರ ಮಾತನಾಡಿದ ಎಸ್ ಟಿ ಮೋರ್ಚಾ ಅದ್ಯಕ್ಷರಾದ ಸೋಮನಾಯಕ್‍ರವರು ಚಾಮರಾಜನಗರ ಜಿಲ್ಲೆಯಲ್ಲಿ ಈ ಹಿಂದೆ ನೆಡದ ಬಹತೇಕ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸರಿಯಾದ ರೀತಿಯ ಸ್ಪಂದನೆ ದೂರಕದೇ ಬಿಜೆಪಿ ಜಿಲ್ಲೆಯಲ್ಲಿ ಅನಾತವಾಗಿತ್ತು, ಬಿಜೆಪಿಗೆ ಸರಿಯಾದ ನಾಯಕತ್ವ ಇಲ್ಲದಿರವುದು ಪ್ರಮುಖ ಕಾರಣವಾಗಿತ್ತು . ಆದರೆ ವಿ ಸೋಮ್ಮಣ್ಣರವರಿಗೆ ಜಿಲ್ಲಾ ಉಸ್ತುವಾರಿ ನೀಡಿರುವುದು ಎಲ್ಲಾ ಕಾರ್ಯಕರ್ತರಿಗೆ ಬಲ ಬಂದತಾಗಿದ್ದು ಎಲ್ಲರ ಮೊಗದಲ್ಲಿ ಸಂತಸ ಮೂಡಿದೆ ಎಂದರು.
ಹನೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮ್ಮಣ್ಣ : ರಾಜ್ಯ ಬಿಜೆಪಿ ಉಪಾದ್ಯಕ್ಷ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿವಾಗಿರುವ ಇವರು ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟು ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೂಂದಿರುವ ಕಾರಣ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯಕರಣಿ ಸದಸ್ಯ ಜಿ.ಕೆ.ಹೂಸರು ಬಸವರಾಜು ತಿಳಿಸಿದರು
ಇದೇ ಸಂದರ್ಭದಲ್ಲಿ ಒಡಯರ್‍ಪಾಳ್ಯ ಮೂರ್ತಿ ಲಿಂಗೇಗೌಡ (ಮಂಜೇಶ್) ಬಸವರಾಜು ಕಣ್ಣೂರು ನಾಗರಾಜು ಮಣ್ಣಗಳ್ಳಿ ಶಿವಪ್ಪ ನಂಜಪ್ಪ ವೆಂಕಟೇಗೌಡ ಜಗನ್ನಾತ್ ಶಾಗ್ಯ ಅನಿಲ್ . ಹರ್ಷಿತ್ , ಚೇತನ್‍ಗೌಡ ಸಾಗರ್ ,ರಾಜೇಂದ್ರ ,ವಿಷ್ಣು, ರಾಮಪುರ ಸ್ವರೂಪ್ ಇನ್ನಿತರರು ಹಾಜರಿದ್ದರು