ನಾಲೆಗೆ ಬಿದ್ದ ಟ್ರ್ಯಾಕ್ಟರ್ : ಚಾಲಕ ಮೃತ್ಯು
Update: 2017-09-12 19:47 IST
ಮಂಡ್ಯ, ಸೆ.12: ಟ್ರ್ಯಾಕ್ಟರ್ ನಾಲೆಗೆ ಉರುಳಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ನಾರಾಯಣ ಎಂಬುವರ ಪುತ್ರ ಅಭಿಷೇಕ್ ಸಾವನ್ನಪ್ಪಿದ ಚಾಲಕ. ಈತ ರಘು ಅವರ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಕ್ಕದ ಹೇಮಾವತಿ ನಾಲೆಗೆ ಉರುಳಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.