ಚಿಕ್ಕಮಗಳೂರು : ಮಹಿಳೆ ನಾಪತ್ತೆ

Update: 2017-09-12 14:29 GMT

ಚಿಕ್ಕಮಗಳೂರು, ಸೆ.12:ರಾಮದೇವರಹಳ್ಳಿ ವಾಸಿ ಗೀತಾ(21ವರ್ಷ) ಎಂಬ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 08 ರಂದು ಬೆಳಿಗ್ಗೆ 10-00 ಗಂಟೆಗೆ  ಮನೆಯಿಂದ ಚಿಕ್ಕಮಗಳೂರಿನ ಎಸ್.ಟಿ.ಜೆ ಕಾಲೇಜಿನಲ್ಲಿ ಡಿಗ್ರಿ ಅಂಕಪಟ್ಟಿಯನ್ನು ತರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ, 4.8 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ಸಾಧಾರಣಾ ಮೈಕಟ್ಟು, ತಿಳಿ ನೀಲಿ ಬಣ್ಣದ ಟಾಪ್, ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ. ಕನ್ನಡ ಮಾತನಾಡುವ ಇವರ ಮಾಹಿತಿ ಇದ್ದಲ್ಲಿ ಕೂಡಲೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ (ದೂ: 08262-220588) ಅಥವಾ ಚಿಕ್ಕಮಗಳೂರು ಕಂಟ್ರೋಲ್ ರೂಂ (ದೂ: 08262-235608) ಅಥವಾ ಎಸ್.ಪಿ. ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News