ಬಿಜೆಪಿ ಚುನಾವಣಾ ಸಂಚಾಲಕರಾಗಿ ರಘು ಜನ್ನಾಪುರ ಅಯ್ಕೆ
ಮೂಡಿಗೆರೆ, ಸೆ.12: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕರಾಗಿ ಜೆ.ಎಸ್.ರಘು ಜನ್ನಾಪುರ ಇವರನ್ನು ಜಿಲ್ಲಾದ್ಯಕ್ಷ ಜೀವರಾಜ್ ನೇಮಕ ಮಾಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಉಸ್ಥುವಾರಿ ಸಂಚಾಲಕ ಹೊಣೆಯನ್ನು ಇವರಗೆ ವಹಿಸಲಾಗಿದೆ.
ಕಾಲೇಜು ರಂಗದಿಂದಲೂ ಸಂಘಪರಿವಾರದಲ್ಲಿ ಗುರುತಿಸಿಕೊಂಡು ಬಂದಿರುವ ಇವರು, ಎಬಿವಿಪಿ ಮೂಲಕ ಸಾರ್ವಜನಿಕ ಜೀವನಕ್ಕೆ ಪಾದರ್ಪಣೆ ಮಾಡಿ, ಇಲ್ಲಿನ ಡಿಎಸ್‍ಬಿಜಿ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕನಾಗಿ, ನಂತರ ಬಿಜೆಪಿ ಪಕ್ಕಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ತಾಲ್ಲುಕು ಯುವಮೋರ್ಚಾ ಅದ್ಯಕ್ಷನಾಗಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ, ಯುವಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ, ಪಕ್ಷಕ್ಕೆ ಸೇವೆ ಸಲ್ಲಿಸಿದ್ದು, ಕಳೆದ ಬಾರಿ ತಾಲ್ಲೂಕು ಮಂಡಲ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿದ್ದರು. ಇವರ ನೇಮಕವನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಂಡಲ ಅದ್ಯಕ್ಷ ಪ್ರಮೋದ್ ದುಂಡುಗ ಇವರು ಸ್ವಾಗತಿಸಿದ್ದಾರೆ.