ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಎಸ್ಟಿ ಮತಗಳೇ ನಿರ್ಣಾಯಕ : ಕೆ.ಪಾಲಯ್ಯ
ತುಮಕೂರು,ಸೆ.12:ಜಿಲ್ಲೆಯಲ್ಲಿ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕ ಜನಾಂಗ ಸುಮಾರು 2.45 ಲಕ್ಷಗಳಷ್ಟು ಇದ್ದು, ಯಾವುದೇ ರಾಜಕೀಯ ಪಕ್ಷಗಳ ಬೆಳವಣಿಗೆ ನಮ್ಮ ನಾಯಕ ಜನಾಂಗದ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕೆ.ಪಿಸಿ.ಸಿ. ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಕೆ.ಪಾಲಯ್ಯ ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ತುಮಕೂರು ಕಚೇರಿಗೆ ಆಗಮಿಸಿ, ಎಸ್ಪಿ ವಿಭಾಗದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು,ಇತ್ತೀಚಿಗೆ ರಾಜ್ಯದ ಹಿಂದುಳಿದ ವರ್ಗದ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡದವರಿಗೆ ಹಲವಾರು ಯೋಜನೆಗಳನ್ನು ನೀಡಿ, ಅವರ ಅಭ್ಯುದಯಕ್ಕೆ ಕಾರಣರಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಉದ್ದೇಶದಿಂದ ರಾಜ್ಯಾದ್ಯಂತ ಸುತ್ತಿ ನಾಯಕ ಜನಾಂಗವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ ಎಂದ ಅವರು,ಅಲ್ಲದೆ ಕೆಲವೊಂದು ನಿಗಮ ಮಂಡಳಿಗಳಲ್ಲಿ ನಾಯಕ ಜನಾಂಗದವರಿಗೆ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನ-ಮಾನ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಕೆ.ಪಾಲಯ್ಯ ತಿಳಿಸಿದರು.
ದೇಶದ ಇತಿಹಾಸದಲ್ಲೇ ಎ.ಐ.ಸಿ.ಸಿ. ಮಟ್ಟಕ್ಕೆ ಕಾಂಗ್ರೆಸ್‍ಪಕ್ಷ ನಾಯಕ ಜನಾಂಗದವರನ್ನು ಗುರುತಿಸಿ,ಸತೀಶ್ ಜಾರಕಿಹೊಳೆ ಯವರಿಗೆ ಬಹುದೊಡ್ಡ ಜವಾಬ್ದಾರಿಯನ್ನು ನೀಡಿದೆ.ಸರಕಾರ ಮತ್ತು ಪಕ್ಷದ ಅಚಿತರಿಕ ಹುದ್ದೆಗಳಲ್ಲಿ ಇನ್ನು ಹೆಚ್ಚಿನ ಸ್ಥಾನಮಾನಗಳನ್ನು ನಾಯಕ ಸಮುದಾಯದವರಿಗೆ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ.ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದ ಜೊತೆ ಜೊತೆಯಾಗಿ ನಾಯಕ ಜನಾಂಗದವರಿಗೂ ಸಹ ಹೆಚ್ಚಿನ ಆದ್ಯತೆ ಸಿಗುವಂತೆ ಮಾಡುವುದು ರಾಜ್ಯಾಧ್ಯಕ್ಷನಾಗಿರುವ ನನ್ನ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ದಿವಂಗತ ಇಂದಿರಗಾಂಧಿಜಿಯವರ ಕಾಂಗ್ರೆಸ್‍ನ್ನು ಪುನರ್ ಸ್ಥಾಪನೆ ಮಾಡಬೇಕು,ಆದು ಕರ್ನಾಟಕದಿಂದಲೇ ಪ್ರಾರಂಭವಾಗಬೇಕು.ಕಾಂಗ್ರೆಸ್ ಸರಕಾರ ತುಂಭಾ ಒಳ್ಳೇಯ ಜನಪರ ಕೆಲಸಗಳನ್ನು ಮಾಡಿರುವುದೇ ದೇಶದಲ್ಲೇ ಪ್ರಥಮ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್.ಟಿ.ಘಟಕದ ಅಧ್ಯಕ್ಷ ತು.ಬಿ. ಮಲ್ಲೇಶ್,ಲಿಂಗರಾಜು, ಶರತ್‍ಕುಮಾರ್, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾದ ಸುಮುಖ ಕೊಂಡವಾಡಿ, ಓಬಳರಾಜು, ವಕೀಲ ಶಿವಕುಮಾರ್, ರಾಜೇಶ್ ದೊಡ್ಮನೆ, ದಿವಾಕರ್, ಮೊಹನ್, ಅನಿಲ್‍ಕುಮಾರ್, ಯಶೋದಮ್ಮ, ಮಂಜಳಾ ರಂಗಸ್ವಾಮಿ, ಚರಣ್‍ರಾಜು, ಸುಶೀಲ್, ರಮೇಶ್, ಪಂಕಜ, ಜೈನ್, ಅಬ್ಬಾಸ್, ಸ್ಯೆಯದ್, ಸುಮಂತ್ ರಜನಿ ಮತ್ತಿತರರಿದ್ದರು.