ಬಿಎಸ್‍ಎನ್‍ಎಲ್ ಬ್ರಾಂಡ್‍ಬ್ಯಾಂಡ್ ಸೇವೆ ಸ್ಥಗಿತ : ಗ್ರಾಹಕರಿಂದ ಪ್ರತಿಭಟನೆ

Update: 2017-09-13 13:00 GMT

ಸೊರಬ,ಸೆ.13: ತಾಲ್ಲೂಕಿನಾದ್ಯಂತ 5 ದಿನಗಳಿಂದ ಬಿಎಸ್‍ಎನ್‍ಎಲ್ ಬ್ರಾಂಡ್‍ಬ್ಯಾಂಡ್ ಸೇವೆ ಸ್ಥಗಿತಗೊಂಡಿದ್ದು, ಸರ್ಕಾರಿ ಕಛೇರಿಗಳಿಗೆ, ಆನ್‍ಲೈನ್ ವರ್ಕಿಂಗ್ ಸೆಂಟರ್‍ಗಳ ಕೆಲಸಕ್ಕೆ ಅಡ್ಡಿಯಾಗಿರುವುದನ್ನು ಖಂಡಿಸಿ ಗ್ರಾಹಕರು ತಮ್ಮ ಲ್ಯಾಂಡ್‍ಲೈನ್ ಫೋನ್‍ಗಳನ್ನು ತೆಗೆದುಕೊಂಡು ಬಂದು ಬಿಎಸ್‍ಎನ್‍ಎಲ್ ಕಛೇರಿಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು. 

ಬಿಎಸ್‍ಎನ್‍ಎಲ್ ಬ್ರಾಂಡ್‍ಬ್ಯಾಂಡ್ ಸೇವೆ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಗಳಿಗೆ ಅರ್ಜಿಸಲ್ಲಿಸಲು ತೀವ್ರ ಸಮಸ್ಯೆ ಉಂಟಾಗಿ ಸಮಯ ಮುಗಿಯುವ ಆತಂಕದಲ್ಲಿದ್ದಾರೆ.  ಗ್ರಾಮ ಪಂಚಾಯತಿಗಳಿಗೆ ಹಾಗೂ ನಾಡಕಛೇರಿಗಳ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಕೂಡ ನಡಯದಂತಾಗಿದೆ. ಒಎಫ್‍ಸಿ ವ್ಯವಸ್ಥೆಗೆ ಸರ್ಕಾರವು ಸಾವಿರಾರು ಕೋಟಿ ಖರ್ಚು ಮಾಡಿದರು ಸಾರ್ವಜನಿಕರ ಸೇವೆಗೆ ಸಿಗದಂತಾಗಿದೆ. ಈ ಸಮಸ್ಯೆ ಪ್ರತೀ ತಿಂಗಳು ಕಾಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷತನವನ್ನು ಎದ್ದುಕಾಣಿಸುತ್ತದೆ ಎಂದು ಮುಖ್ಯ ಅಭಿಯಂತರರನ್ನು ಗ್ರಾಹಕರು ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ನೆಮ್ಮದಿ ಶ್ರೀಧರ್, ಜಯಣ್ಣ, ಸನ್ನಿ ಮ್ಯಾಥ್ಯು, ಸೈಯದ್ ಖದೀರ್ ಗ್ಲೋಬಲ್, ಅಶೋಕ್, ಸಂದೀಪ, ವೆಂಕಟರಮಣ ಹೆಗಡೆ, ಮಂತನ್ ಮೋಟರ್ಸ್, ಉಮೇಶ್, ರಮೇಶ್, ಗಜಾನನ್, ಗೌಸ್‍ಅಲಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News