ಮೆಘಾ ಲೋಕ್ ಅದಾಲತ್‍ನಲ್ಲಿ 641 ಪ್ರಕರಣಗಳ ಇತ್ಯರ್ಥ,ರೂ.71.85 ಲಕ್ಷ ಪರಿಹಾರ ವಿತರಣೆ : ಬಿ.ಎಲ್. ಜಿನರಾಳ್ಕರ್
ತುಮಕೂರು,ಸೆ.13:ಜಿಲ್ಲಾದ್ಯಂತ ಸೆಪ್ಟೆಂಬರ್ 9ರಂದು ನಡೆದ ರಾಷ್ಟ್ರೀಯ ಮೆಘಾ ಲೋಕ್ ಅದಾಲತ್‍ನಲ್ಲಿ ಒಟ್ಟು 641 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.ಅವುಗಳಲ್ಲಿ 44 ವ್ಯಾಜ್ಯಪೂರ್ವ ಪ್ರಕರಣಗಳಾಗಿದ್ದು, 597 ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಪ್ರಕರಣಗಳಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ತಿಳಿಸಿದ್ದಾರೆ.
ಅದರಲ್ಲಿ 100 ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿದ್ದು ಒಟ್ಟು ರೂ.24,60,732 ಪರಿಹಾರವನ್ನು ಕೊಡಿಸಲಾಗಿದೆ. 383 ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿದ್ದು, ಒಟ್ಟು ರೂ. 44,800 ದಂಡವನ್ನು ವಸೂಲಿ ಮಾಡಲಾಗಿದೆ.48 ಚೆಕ್ ಅಮಾನ್ಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದ್ದು, ಒಟ್ಟು 21,96,000 ರೂ.ಗಳನ್ನು ಪಿರ್ಯಾದಿದಾರರಿಗೆ ನಷ್ಟ ಪರಿಹಾರ ಕೊಡಿಸಲಾಗಿದೆ.31 ಬ್ಯಾಂಕ್ ಮತ್ತು 7 ದೂರವಾಣಿ ಬಿಲ್ ಬಾಕಿ ವಸೂಲಾತಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಒಟ್ಟು 23,12,100 ರೂ.ಗಳನ್ನು ವಸೂಲಿ ಮಾಡಲಾಗಿದೆ.
20 ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಒಟ್ಟು ರೂ.47,25,000 ಗಳನ್ನು ನಷ್ಟ ಪರಿಹಾರ ಕೊಡಿಸಲಾಗಿದೆ.3 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಒಟ್ಟು ರೂ.10,000 ಗಳನ್ನು ಪರಿಹಾರ ಕೊಡಿಸಲಾಗಿದೆ.44 ಜನನ ಮತ್ತು ಮರಣ ಪ್ರಕರಣಗಳನ್ನು ರಾಜಿ ಸಚಿದಾನದ ಮೂಲಕ ಬಗೆಹರಿಸಲಾಗಿದೆ ಎಂದು ನ್ಯಾ.ಬಾಬಾ ಸಾಹೇಬ್ ಜೀನರಾಳ್ಕರ್ ತಿಳಿಸಿದ್ದಾರೆ.