×
Ad

ಸ್ತ್ರೀ ಶಕ್ತಿ ಮಹಿಳಾ ಸಂಘಗಳಿಗೆ ಮಧ್ಯಮಾವಧಿ ಸಾಲ ವಿತರಣೆ

Update: 2017-09-13 19:06 IST

ಬಾಗೇಪಲ್ಲಿ,ಸೆ.13:  ಬಡ್ಡಿ ರಹಿತ ಸಾಲ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಟ್ಟರೆ ಬೇರೆ ಯಾವುದೇ ಸರ್ಕಾರ ನೀಡಿಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಗೂಳೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಸ ಆವರಣದಲ್ಲಿ ಏರ್ಪಡಿಸಲಾಗಿದ್ದ  ಸ್ತ್ರೀ ಶಕ್ತಿ ಮಹಿಳಾ ಸಂಘಗಳಿಗೆ ಮಧ್ಯಮಾವಧಿ ಸಾಲವನ್ನು ವಿತರಿಸಿ ಮಾತನಾಡಿದ ಅವರು 18 ಸ್ವ ಸಹಾಯ ಗುಂಪುಗಳಿಗೆ ಸುಮಾರು 63 ಲಕ್ಷ 60 ಸಾವಿರ ರೂ.ಗಳ ಸಾಲವನ್ನು ವಿತರಣೆ ಮಾಡಲಾಗಿದೆ.

ಈ ಸಾಲವನ್ನು ಪಡೆದ ಮಹಿಳೆಯರು ಹೈನುಗಾರಿಕೆಗೆ ಉಪಯೋಗಿಸಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವಂತೆ  ಮಹಿಳೆಯರಿಗೆ ಕರೆ ನೀಡಿದರು. ಇಡೀ ತಾಲ್ಲೂಕಿಗೆ ಸುಮಾರು 32 ಕೋಟಿ ರೂ.ಗಳನ್ನು ಬಡ್ಡಿರಹಿತ ಸಾಲವನ್ನು ನೀಡಲಾಗಿದ್ದ ಈ ಪೈಕಿ 12 ಕೋಟಿ ರೂ.ಗಳ  ಮಹಿಳೆಯರಿಗಾಗಿ ಸಾಲವನ್ನು ನೀಡಲಾಗಿದೆ.  

ಈ ರೀತಿಯಲ್ಲಿ ಸಾಲವನ್ನು ನೀಡುವ ಉದ್ದೇಶ ಮಹಿಳೆಯರು ಪಡೆದಿರುವ ಸಾಲವನ್ನು ಮರುಪಾವತಿ ಮಾಡುತ್ತಿರುವುದರಿಂದ  ಹೆಚ್ಚಾಗಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದರು. 

ಗೂಳೂರು ಪ್ರಾಥಮಿಕ ಕೃಷಿಪತ್ತಿನ ಸಹಾಕಾರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ನಮ್ಮ ಬಾಗದಲ್ಲಿ ಮಳೆ ಬೆಳೆಯಿಲ್ಲದೆ ಅತ್ಯಂತ ಕಡು ಬಡತನದಲ್ಲಿ ಜೀವನ ಸಾಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ  ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ನೀಡುತ್ತಿರುವ ಸಾಲ ನಿಟ್ಟಿಸಿರು ಬಿಟ್ಟಂತಾಗಿದೆ. ಇನ್ನೂ ಹೆಚ್ಚಿನ ಸ್ತ್ರೀ ಶಕ್ತಿ ಸಂಘಗಳಿರುವುದರಿಂದ ಅವುಗಳಿಗೂ ಸಾಲವನ್ನು ನೀಡುವಂತೆ ಮನವಿ ಮಾಡಿದರು.

 ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ನರೇಂದ್ರಬಾಬು, ಜಿ.ಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ವಿ.ನಾಗರಾಜ್ ಗ್ರಾ.ಪಂ ಅಧ್ಯಕ್ಷ ಮುನ್ನಾಖಾನ್, ತಾ.ಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ಕೃಷಿಪತ್ತಿನ ಸೇವಾ ಸಹಕಾರಿ ಸಂಘದ ಸಿಎಓ ನಾಗಭೂಷಣರಾವು, ಪಡಿಓ ವೆಂಕಟರವಣಪ್ಪ,  ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ನಿದೇರ್ಶಕರಾದ ಅವುಲಪ್ಪ, ವೆಂಕಟರಾಮಿರೆಡ್ಡಿ, ರಂಗಾರೆಡ್ಡಿ, ಎಪಿಎಂಸಿ ಮಿದೇರ್ಶಕ ನರಸಿಂಹಪ್ಪ, ತಾ.ಪಂ ಸದಸ್ಯ ಈಶ್ವರಮ್ಮ ವೀರನಾರಾಯಣ, ಮುಖಂಡರಾದ ವೆಂಕಟರಾಯಪ್ಪ, ಶ್ರೀರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News