ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮ
ಬಾಗೇಪಲ್ಲಿ,ಸೆ.13: ಜಾತಿಯ ಅಸಮಾನತೆಯನ್ನು ತೊಲಗಿಸಲು ತೀವ್ರವಾಗಿ ಖಂಡಿಸಿದ್ದ ಮಹಾನ್ ನಾಯಕರಾದ ದೇವ ಮಾನವ ಬ್ರಹ್ಮರ್ಷಿ ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂಗತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರೆ ನೀಡಿದರು.
ಪಟ್ಟಣದ ತಾ.ಪಂ ಸಂಭಾಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ,ಈಡಿಗರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದಿನ ಕಾಲದಲ್ಲಿ ಜಾತಿ ಪದ್ದತಿ,ಬಾಲ್ಯ ವಿವಾಹ, ಸತಿಸಹಗಮನ ಪದ್ದತಿಯಂತಹ ಅನಿಷ್ಠ ಪದ್ದತಿಗಳ ವಿರುದ್ದ ಧ್ವನಿ ಎತ್ತಿ ಹೋರಾಟಗಳ ಮೂಲಕ ಅರಿವು ಮೂಡಿಸುತ್ತಿದ್ದರು. ನಾವು ಎಷ್ಟು ವರ್ಷಗಳು ಬದುಕುತ್ತೇವೆ ಎನ್ನುವುದು ಮುಖ್ಯವಲ್ಲ, ಬದುಕಿದ್ದ ಅವಧಿಯಲ್ಲಿ ನಮ್ಮ ಸಾಧನೆ ಏನು ಎಂಬುದು ಮುಖ್ಯ. ಇಂತಹ ಮಹಾನ್ ನಾಯಕರು ಜನ್ಮ ತಾಳದೆ ಇದಿದ್ದರೆ ಇಂತಹ ಅನಿಷ್ಠ ಪದ್ದತಿಗಳು ಇಂದಿಗೂ ಜೀವಂತವಾಗಿರುತ್ತಿತ್ತು ಎಂದರು.
ಈಡಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಹೆಚ್.ನಾಗರಾಜ್ ಮಾತನಾಡಿ, ಬಹುತೇಕರಲ್ಲಿ ಹಿಂದುಳಿದ ವರ್ಗಗಳು ಎಂಬ ತಾತ್ಸಾರ ಮನೋಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದುಳಿದ ವರ್ಗಗಳು ಅಷ್ಟೋಂದು ಹೀನಾಯವೇ ಎಂದು ಪ್ರಶ್ನಿಸಿದ ಅವರು ಸಂವಿಧಾನವನ್ನು ರಚನೆ ಮಾಡಿದ ವಿಶ್ವ ಮಾನವ ಡಾ.ಬಿ.ಆರ್.ಅಂಬೇಡ್ಕರ್ ಹಿಂದುಳಿದ ವರ್ಗದವರಲ್ಲವೇ, ಮಹಾಭಾರತ ರಚನೆ ಮಾಡಿರುವ ವೇದ ವ್ಯಾಸರು, ರಾಮಾಯಣ ಬರೆದ ವಾಲ್ಮೀಕಿ,ಕಾಲಜ್ಞಾನ ಬರೆದ ಕೈವಾರ ತಾತಯ್ಯ ಹಿಂದುಳಿದ ವರ್ಗದವರಲ್ಲವೇ, ಹಿಂದುಳಿದ ವರ್ಗಗಳಿಗೆ ಅವಕಾಶ ನೀಡಿದರೆ ಯಾವುದೇ ರೀತಿ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಜೀವಂತ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಬ್ರಹ್ಮರ್ಷಿ ನಾರಾಯಣ ಗುರಗಳ ಬಾವ ಚಿತ್ರ ಪಟಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಜಿ.ಪಂ ಸದಸ್ಯ ನರಸಿಂಹಪ್ಪ, ಪುರಸಭೆ ಅಧ್ಯಕ್ಷೆ ಮಮತಾನಾಗರಾಜರೆಡ್ಡಿ, ತಾ.ಪಂ.ಸ್ತಾಯಿಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಗೇಡ್ 2 ತಹಸೀಲ್ದಾರ್ ಸಿಬ್ಖತುಲ್ಲಾ, ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ವಿ.ನಾಗರಾಜ್, ಬ್ಲಾಂಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ನರೇಂದ್ರ, ಈಡೀಗರ ಸಂಘದ ಅಧ್ಯಕ್ಷ ಬಿ,ವಿಜಯಪ್ರಕಾಶ್, ಗೌರವಾಧ್ಯಕ್ಷ ಎಸ್.ಎಸ್.ರಮೇಶ್ ಬಾಬು ಪದಾಧಿಕಾರಿಗಳಾದ ಬಿ.ವಿ.ವೆಂಕಟೇಶ್, ಹೆಚ್ ವೆಂಕಟೇಶ್, ಸತ್ಯನಾರಾಯಣ,ಆನಂದ್, ಶ್ರೀನಿವಾಸ್, ರವಿ, ಆವುಲಪ್ಪ ಮತ್ತಿತರರು ಹಾಜರಿದ್ದರು.