ಹಾಸನ :ಜನರೇಟರ್ ಗೆ ಆಕಸ್ಮಿಕ ಬೆಂಕಿ
Update: 2017-09-13 20:09 IST
ಹಾಸನ,ಸೆ.13: ನಗರದ ಶಂಕರಮಠ ರಸ್ತೆ, ಅಯ್ಯಪ್ಪ ದೇವಾಲಯದ ಬಳಿ ಇರುವ ಮುಕುಂದ ಐಯ್ಯಾಂಗರ್ ಬೇಕರಿ ಜನರೇಟರ್ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಮದ್ಯಾಹ್ನ ನಡೆದಿದೆ.
ವಿದ್ಯುತ್ ಇಲ್ಲವಾದ್ದರಿಂದ ಮುಕುಂದ ಐಯ್ಯಾಂಗರ್ ಬೇಕರಿ ಕಟ್ಟಡದ ಮೇಲ್ಚಾವಣಿ ಮೇಲೆ ದೊಡ್ಡದಾದ ಜನರೇಟರನ್ನು ಆನ್ ಮಾಡಲಾಗಿತ್ತು. ಮದ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಬೇಕರಿ ಮೇಲ್ಚಾವಣಿಯಿಂದ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ದೂರವಾಣಿ ಕರೆ ಮೂಲಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸುವ ಮೂಲಕ ಆಗುತ್ತಿದ್ದ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ. ಜನರೇಟರ್ ಮೇಲೆ ಬೇಡವಾದ ಪೇಪರ್, ರಟ್ಟನ್ನು ಇಡಲಾಗಿತ್ತು. ಈ ವೇಳೆ ಬಿಸಿಯ ತಾಪಕ್ಕೆ ಬೆಂಕಿ ಹಚ್ಚಿಕೊಂಡಿದೆ ಎಂದು ಹೇಳಲಾಗಿದೆ. ಈ ವೇಳೆ ಬೇಕರಿಗೆ ಯಾವ ಹಾನಿ ಆಗಿರುವುದಿಲ್ಲ. ಬೆಂಕಿ ಕಾಣೀಸಿಕೊಂಡ ಸಮಯದಲ್ಲಿ ಸುತ್ತ ಗೋಡೆ ಹಾಗೂ ಜನರೇಟರ್ ಕರಲಕಲು ಆಗಿದೆ.