×
Ad

ಜಲೀಲ್ ಕರೋಪಾಡಿ ಕೊಲೆ ಪ್ರಕರಣ: ದಾಖಲೆಗಳನ್ನು ಸಲ್ಲಿಸಲು ವಿಟ್ಲ ಪೊಲೀಸರಿಗೆ ಹೈಕೋರ್ಟ್ ಸೂಚನೆ

Update: 2017-09-13 22:17 IST

ಬೆಂಗಳೂರು, ಸೆ.13: ಕೊಲೆಗೀಡಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್‌ಗೆ ವಿದೇಶದಿಂದ ಅಂತಾರ್ಜಾಲ ಕರೆ (ವಿಓಐಪಿ) ಬಂದಿದ್ದ ಬಗ್ಗೆ ದಾಖಲೆಗಳನ್ನು ಸಲ್ಲಿಸುವಂತೆ ವಿಟ್ಲ ಠಾಣಾ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.

ಅಬ್ದುಲ್ ಜಲೀಲ್ ಕೊಲೆ ಪ್ರಕರಣ ಸಂಬಂಧ ತಮ್ಮ ಮನೆಯ ಶೋಧನೆಗೆ ಅಧೀನ ನ್ಯಾಯಾಲಯ ಮಾಡಿದ ಆದೇಶ ರದ್ದುಪಡಿಸಬೇಕು ಮತ್ತು ಮನೆಯಿಂದ ವಶಪಡಿಸಿಕೊಂಡ ವಸ್ತುಗಳನ್ನು ಹಿಂದಿರುಗಿಸುವಂತೆ ವಿಟ್ಲ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಆರೋಪಿಗಳಾದ ಪಿ.ದಿನೇಶ್ ಶೆಟ್ಟಿ, ವಿನೋದ್ ಕುಮಾರ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಕೊಲೆಯಾಗುವ ಮುನ್ನ ಜಲೀಲ್‌ಗೆ ಭೂಗತ ದೊರೆ ವಿಕ್ಕಿ ಶೆಟ್ಟಿ ವಿದೇಶದಿಂದ ವಿಓಐಪಿ ಕರೆ ಮಾಡಿ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ವಿಟ್ಲ ಪೊಲೀಸರಿಗೆ ವಿಓಐಪಿ ಕರೆಯ ದಾಖಲೆಗಳನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News