×
Ad

ನಾಲ್ವರು ಶಿಕ್ಷಕರಿಗೆ ನ್ಯಾಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ

Update: 2017-09-13 23:03 IST

ಮಡಿಕೇರಿ, ಸೆ.13 :ಜಿಲ್ಲೆಯ ನಾಲ್ವರು ಶಿಕ್ಷಕರಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನ್ಯಾಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ.ತೀತಿರ ರೇಖಾ ವಸಂತ್ (ಸಾಹಿತ್ಯ), ಸುಂಟಿಕೊಪ್ಪ ಪ್ರೌಡಶಾಲಾ ಶಿಕ್ಷಕ ಟಿ.ಜಿ. ಪ್ರೇಮ್ ಕುಮಾರ್ (ಪರಿಸರ), ನೆಲಜಿ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕ ಸಿ.ಎಸ್.ಸುರೇಶ್ ( ಗಣಿತ), ಮತ್ತು ಸುಂಟಿಕೊಪ್ಪ ಪ್ರಾಥಮಿಕ ಶಾಲೆಯ ಕ್ರೀಡಾ ಶಿಕ್ಷಕ ಪಾಸುರ ನಂದಾ ಅವರನ್ನು ನ್ಯಾಷನ್ ಬಿಲ್ದರ್ಸ್ ಪ್ರಶಸ್ತಿ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಡಾ.ತೀತಿರ ರೇಖಾ ವಸಂತ್, ಶಿಕ್ಷಣ ವ್ಯವಸ್ಥೆ ಹಾಳಾದರೆ ಇಡೀ ದೇಶವೇ ಹಾಳಾದಂತೆ. ಪ್ರಸ್ತುತ ದಿನಗಳಲ್ಲಿ ಭಾರತವನ್ನು ವಿವಿಧ ರೀತಿಯಲ್ಲಿ ಹಾಳುಗೆಡಹುವ ಕಾಯ9 ನಿರಂತರವಾಗಿ ನಡೆಯುತ್ತಲೇ ಇದೆ. ಇಂಥ ಪರಿಸ್ಥಿತಿಯಲ್ಲಿ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಮಹತ್ವದ ಹೊಣೆಯ  ಸವಾಲನ್ನು ಶಿಕ್ಷಕರು ಎದುರಿಸುತ್ತಿದ್ದಾರೆ ಎಂದರು. ಮೌಲ್ಯಯುತವಾದ ಜೀವನದ ಮಾನವೀಯ ಮೌಲ್ಯಗಳ ಬಗ್ಗೆ ವಿದ್ಯಾಥಿ9ಗಳ ಮೂಲಕ ಸಮಾಜದ ಜನತೆಗೆ ತಿಳಿಹೇಳುವ ಕಾಯ9ವನ್ನೂ ಶಿಕ್ಷಕ ವರ್ಗ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದ ರೇಖಾ ವಸಂತ್, ಇಂದಿನ ಸಮಾಜಿಕ ಬದಲಾವಣೆಯ ದಿನಗಳಲ್ಲಿ ಕುಟುಂಬಕ್ಕೊಂದೇ ಮಗುವಿರುವಾಗ ಆ ಮಗುವನ್ನೂ ಸರಿಯಾಗಿ ನೋಡಿಕೊಳ್ಳಲು ಉದ್ಯೋಗಸ್ಥ ಪೋಷಕರಿಗೆ ಅಸಾಧ್ಯವಾದ ಪರಿಸ್ಥಿತಿಯಿದೆ. ಹೀಗಿರುವಾಗ ಇಂಥ ಮಗುವಿಗೆ ಮೌಲ್ಯಯುತ ಜೀವನ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಶಿಕ್ಷಿಸಿ, ಕ್ಷಮಿಸಿ, ಕಲಿಸಿ ಎಂಬ ತತ್ವದಡಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಮನೆಯಲ್ಲಿ ಸಾಧ್ಯವಾಗದಿರುವ ಕಾರ್ಯವನ್ನು ಶಾಲೆಯಲ್ಲಿ ಶಿಕ್ಷಕರು ನಿಭಾಯಿಸುವಂಥ ಪರಿಸ್ಥಿತಿಯಿದೆ ಎಂದೂ ಡಾ.ರೇಖಾ ವಸಂತ್ ಹೇಳಿದರು.
 ಸನ್ಮಾನ ಸ್ವೀಕರಿಸಿ ಮಾತನಾಡಿದ  ಶಿಕ್ಷಕ ಟಿ.ಜಿ.ಪ್ರೇಮ್ ಕುಮಾರ್, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಮತ್ತಷ್ಟು ಜಾಗೃತಿ ಮೂಡಿಸುವ ಮೂಲಕ ಉಳಿದಿರುವ ನಿಸರ್ಗ ರಕ್ಷಣೆಗೆ ಮಕ್ಕಳನ್ನು ಅಣಿಗೊಳಿಸಬೇಕಾಗಿದೆ. ಒಗ್ಗಟ್ಟಿನಿಂದ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯಗಳು ಆಂದೋಲನ ರೂಪದಲ್ಲಿ ಕಾರ್ಯಗತಗೊಳ್ಳಬೇಕೆಂದು ಹೇಳಿದರು.

 ಶಿಕ್ಷಕ ಸಿ.ಎಸ್.ಸುರೇಶ್ ಮಾತನಾಡಿ, ಗಣಿತ ಪಠ್ಯ ಕಬ್ಬಿಣದ ಕಡಲೆಕಾಯಿ ಎಂಬಂತಿರುವಾಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಣಿತ ವಿಷಯದ ಆಧಾರದಲ್ಲಿಯೇ ಆಯಾ ಶಾಲೆಗಳ ಫಲಿತಾಂಶ ನಿಂತಿರುತ್ತದೆ.  ಹೀಗಿರುವಾಗ ಶಾಲೆಯಲ್ಲಿ ಗಣಿತ ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ.  ಕೊಡಗು ಜಿಲ್ಲೆಯಲ್ಲಿನ 120 ಗಣಿತ ಶಿಕ್ಷಕರೂ ಪ್ರತೀ ವರ್ಷ ಉತ್ತಮ ಫಲಿತಾಂಶ ಲಭಿಸಲು ಶಕ್ತಿ ಮೀರಿ ಶ್ರಮಿಸುತ್ತಿರುವುದರಿಂದಾಗಿಯೇ ಜಿಲ್ಲೆಯಲ್ಲಿ ಫಲಿತಾಂಶ ಉತ್ತಮವಾಗಿದೆ ಎಂದು ಶ್ಲಾಘಿಸಿದರು.

 ಕ್ರೀಡಾ ತರಬೇತಿ ಶಿಕ್ಷಕ ಪಾಸುವ ನಂದಾ ಮಾತನಾಡಿ, 23 ವಷ9ಗಳಿಂದ ಕ್ರೀಡಾ ತರಬೇತಿ ಶಿಕ್ಷಕನಾಗಿ ಕಾಯ9ನಿವ9ಹಿಸುತ್ತಿದ್ದು ಸುಂಟಿಕೊಪ್ಪ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು 17 ಬಾರಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಿದ್ದು 10 ಬಾರಿ ರಾಷ್ಟ್ರಮಟ್ಟಕ್ಕೂ ಈ ತಂಡವನ್ನು ಕಳುಹಿಸಲಾಗಿದೆ. ಈ ಶಾಲಾ ತಂಡ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆಯುವುದೇ ತನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು .

ಶಿಕ್ಷಕರಿಗೆ ನ್ಯಾಷನ್ ಬಿಲ್ಡರ್ಸ್  ಪ್ರಶಸ್ತಿ ಪ್ರಧಾನ ಮಾಡಿದ ಮಂಗಳೂರು  ರೋಟರಿ ಮಿಡ್ ಟೌನ್ ನ  ನಿರ್ದೇಶಕ ರಂಗನಾಥ ಭಟ್, ಶಿಕ್ಷಕರಾಗಿ ಕಾರ್ಯನಿರ್ವಹಿಸುವವರಿಗೆ ಮೊದಲು ತನ್ನ ವೃತ್ತಿಯ ಬಗೆಗೆ ವೃತ್ತಿ ನಿಷ್ಟೆ, ಪ್ರೀತಿ ಇರಬೇಕು. ತಾವು ಕಲಿಸುವ ವಿಷಯ ಮೊದಲು ತಮಗಿಷ್ಟವಾಗಬೇಕು.   ತನ್ನ ಮಕ್ಕಳನ್ನು ಪ್ರೀತಿಸಿದಂತೆಯೇ  ಶಾಲೆಯಲ್ಲಿಯೂ  ವಿದ್ಯಾರ್ಥಿಗಳನ್ನೂ ಆ ಶಿಕ್ಷಕ ಪ್ರೀತಿಸಿ, ಕಾಳಜಿ ತೋರಬೇಕು ಎಂದು ಕಿವಿಮಾತು ಹೇಳಿದರು.
 ಈಗಿನ ಶೈಕ್ಷಣಿಕ ವಿಧಾನದಲ್ಲಿ ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿದ್ದು ಮಕ್ಕಳಷ್ಟೇ ಕ್ರಿಯಾಶೀಲತೆಯನ್ನು ಹೊಂದುವ ಅನಿವಾರ್ಯತೆ ಶಿಕ್ಷಕರಿಗಿದೆ. ಆಧುನಿಕ ಮಾಧ್ಯಮಕ್ಕೆ ಶಿಕ್ಷಕ ವರ್ಗ ವೇಗಗತಿಯಲ್ಲಿ ಹೊಂದಿಕೊಳ್ಳಬೇಕೆಂದೂ ರಂಗನಾಥ ಭಟ್ ಅನಿಸಿಕೆ ವ್ಯಕ್ತಪಡಿಸಿದರು.

 ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ, ಮಾತನಾಡಿ,ನ್ಯಾಷನ್ ಬಿಲ್ಡರ್ಸ್ ಪ್ರಶಸ್ತಿಗೆ  ರೋಟರಿ ಮಿಸ್ಟಿ ಹಿಲ್ಸ್ ಕೊಡಗು ಜಿಲ್ಲೆಯ ಸಾಹಿತ್ಯ, ವಿಜ್ಞಾನ, ಗಣಿತ, ಪರಿಸರ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿನ ಶಿಕ್ಷಕರನ್ನು ಆಯ್ಕೆ ಮಾಡಿ ವಿಭಿನ್ನತೆ ಮೆರೆದಿದೆ. ಈಗಾಗಲೇ ಸಾಕಷ್ಟು ಪ್ರಶಸ್ತಿ ಮೂಲಕ ಸಾಮಾಜಿಕ ಹೊಣೆಗಾರಿಕೆ ಹೊಂದಿರುವ ಶಿಕ್ಷಕರನ್ನು ಪ್ರತಿಷ್ಟಿತ ಪ್ರಶಸ್ತಿ ಮೂಲಕ ಗೌರವಿಸಿದ್ದು ಮಿಸ್ಟಿ ಹಿಲ್ಸ್ ಗೆ ಮತ್ತೊಂದು ಹಿರಿಮೆ ತಂದಿದೆ ಎಂದರು.
 ಮಿಸ್ಟಿಹಿಲ್ಸ್ ಗೌರವ ಕಾರ್ಯದರ್ಶಿ ಪಿ.ಎಂ.ಸಂದೀಪ್ ವಂದಿಸಿದ ಕಾಯ9ಕ್ರಮದಲ್ಲಿ ಸ್ಥಾಪಕಾಧ್ಯಕ್ಷ  ಬಿ.ಜಿ.ಅನಂತಶಯನ,  ನಿರ್ದೇಶಕರಾದ ಕೆ.ಡಿ.ದಯಾನಂದ್, ಡಾ.ಸಿ.ಆರ್.ಪ್ರಶಾಂತ್, ಬಿ.ಕೆ.ರವೀಂದ್ರ ರೈ, ಶಂಕರ್ ಶರ್ಮಾ, ಅಜಿತ್ ನಾಣಯ್ಯ ಅತಿಥಿ ಪರಿಚಯ ನಿರ್ವಹಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News