×
Ad

ಸೆ.20 ರಿಂದ ಶರವನ್ನವರಾತ್ರಿ ಮಹೋತ್ಸವ, ದಸರಾ ದರ್ಬಾರ್ ಧರ್ಮ ಸಮ್ಮೇಳನ

Update: 2017-09-14 17:47 IST

ಕಡೂರು ಸೆ. 14: ಶರವನ್ನವರಾತ್ರಿ ಮಹೋತ್ಸವ ಹಾಗೂ ದಸರಾ ದರ್ಬಾರ್ ಧರ್ಮ ಸಮ್ಮೇಳನವು ಸೆ.20 ರಿಂದ 30ರವಗೆರೆಗೆ ನಡೆಯಲಿದ್ದು, ಸಿದ್ಧತೆಗಳು ಈಗಾಗಲೇ ಭರದಿಂದ ಸಾಗಿವೆ ಎಂದು ದರ್ಬಾರ್ ಸಮಿತಿಯ ಗೌರವಾಧ್ಯಕ್ಷ ಕೆ.ಬಿ.ಮಲ್ಲಿಕಾರ್ಜುನ ತಿಳಿಸಿದರು.

ಅವರು ಗುರುವಾರ ಪಟ್ಟಣದ ಮಹೋತ್ಸವದ ಕಚೇರಿಯಲ್ಲಿ ದಸರಾ ದರ್ಬಾರ್ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, 10 ದಿನಗಳ ಕಾಲ ನಡೆಯುವ ಈ ಮಹೋತ್ಸವಕ್ಕೆ ಭರದ ಸಿದ್ಧತೆಗಳ ನಡೆಯುತ್ತಿವೆ. ಪ್ರತಿದಿನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಬೇಕಿದೆ. ಇದಕ್ಕಾಗಿ ಎಲ್ಲ ಉಪ ಸಮಿತಿಯ ಪದಾಧಿಕಾರಿಗಳು ಒಟ್ಟಾಗಿ ಕಾರ್ಯ ನಿರ್ವಹಿಸುವಂತೆ ಹೇಳಿದರು.

ದರ್ಬಾರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಲೋಕೇಶ್ ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸುವ ಬಾಳೆಹೊನ್ನೂರು ಶ್ರೀಗಳನ್ನು ಸಾವಿರಾರು ಬೈಕ್‍ಗಳ ಮೂಲಕ  ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆ ನಡೆಸಲಾಗಿದೆ. ದರ್ಬಾರ್ ಮಹೋತ್ಸವ ಅಂಗವಾಗಿ ತಾಲೂಕಿನ ಎಲ್ಲಾ ಗ್ರಾಮಾಂತರ ಭಾಗಗಳಿಂದಲೂ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ಬಸ್‍ಗಳಿಗೆ ಮಾರ್ಗಗಳನ್ನು ನೀಡಲಾಗಿದೆ. ಕಾರ್ಯಕ್ರಮಕ್ಕೆ 25 ಸಾವಿರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿದೆ. 6 ಸಾವಿರ ಆಹ್ವಾನ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ ಎಂದರು.

ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್‍ಮೂರ್ತಿ ಮಾತನಾಡಿ, ಇಡೀ ಕಾರ್ಯಕ್ರಮದ ಪ್ರಚಾರ ಕಾರ್ಯ ವ್ಯವಸ್ಥಿತವಾಗಿ ಮಾಡಲಾಗಿದ್ದು. ಯಾವುದೇ ಕಾರ್ಯಕ್ರಮಗಳು ಯಶಸ್ವಿಗೆ ಪ್ರಚಾರ ಪ್ರಮುಖ ಕಾರಣವಾಗಿವೆ. ಜಾತ್ಯತೀತವಾಗಿ. ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ದರ್ಬಾರ್ ಸಮಿತಿ ಕಾರ್ಯಾಧ್ಯಕ್ಷ ಬೆಳ್ಳಿಪ್ರಕಾಶ್, ಕೋಶಾಧ್ಯಕ್ಷ ಪಂಚನಹಳ್ಳಿ ಬಾಬಣ್ಣ, ಹೆಚ್.ಸಿ.ರೇವಣಸಿದ್ದಪ್ಪ, ಸದಾನಂದ, ಸಾಣೇಹಳ್ಳಿ ರೇಣುಕಾರಾಧ್ಯ, ತಾರಾನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News